ವಿಷಪೂರಿತ ಆಹಾರ ಸೇವಿಸಿ 48 ವಿದ್ಯಾರ್ಥಿಗಳು ಅಸ್ವಸ್ಥ

ವಿಷಪೂರಿತ ಆಹಾರ ಸೇವಿಸಿ 48 ವಿದ್ಯಾರ್ಥಿಗಳು ಅಸ್ವಸ್ಥ

ಬೀದರ ಜಿಲ್ಲೆಯ  ಹುಮನಾಬಾದ ಪಟ್ಟಣದ  ಹೊರವಲಯದ ಬಸವತೀರ್ಥ ಗುರುಕುಲ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 48 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕ ಅಸ್ವಸ್ಥಗೊಂಡ ಘಟನೆಯೊಂದು ಜರುಗಿದೆ.

ವಸತಿ ಶಾಲೆಯಲ್ಲಿ‌ ಒಟ್ಟು 200 ಮಕ್ಕಳಿದ್ದು ಬೆಳಗಿನ ಉಪಹಾರಕ್ಕೆ ನಿನ್ನೆ ರಾತ್ರಿಯ ಅನ್ನವನ್ನು ಚಿತ್ರಾನ್ನ ಮಾಡಿ  ನೀಡಲಾಗಿದ್ದು, ಉಪಹಾರ ಸೇವಿಸಿದ ಕೆಲವೇ ಗಂಟೆಯಲ್ಲಿ ಮಕ್ಕಳಿಗೆ  ವಾಂತಿ, ಭೇದಿ ,ಹೊಟ್ಟೆ ನೋವು ಕಂಡುಬಂದಿದೆ. ಮಕ್ಕಳನ್ನು ಕೂಡಲೇ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥಗೊಂಡ 48 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕನಿಗೆ ಯಾವುದೇ ತೊಂದರೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ..

Share this post

Post Comment