ಚಿಟಗುಪ್ಪದಲ್ಲಿ ದಶಕಗಳ ನಂತರ ಭತ್ತ ನಾಟಲು ಆರಂಭಿಸಿದ ರೈತರು.

ಚಿಟಗುಪ್ಪದಲ್ಲಿ ದಶಕಗಳ ನಂತರ ಭತ್ತ ನಾಟಲು ಆರಂಭಿಸಿದ ರೈತರು.

ಬೀದರ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ನಿರ್ಣಾ ಗ್ರಾಮದ ರೈತರಲ್ಲಿ ಈ ವರ್ಷದ ಮುಂಗಾರು ಮಳೆ ಹರ್ಷ ತಂದಿದೆ. ಹವಾಮಾನ ವೈಪರಿತ್ಯ, ಸಕಾಲಕ್ಕೆ ಬಾರದ ಮಳೆಯಿಂದ ಬೇಸತ್ತ ರೈತರು ದಶಕಗಳಿಂದ ಭತ್ತ ನಾಟಿ ಮಾಡುವುದನ್ನೆ ಬಿಟ್ಟಿದರು. ಭಾರತ ದೇಶದಲ್ಲಿ ಪಶ್ಚಿಮ ಬಂಗಾಳ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ. ರಾಜ್ಯದಲ್ಲಿ ಕೊಪಳ ಜಿಲ್ಲೆಯಲ್ಲಿ ಭತ್ತ ಬೆಳೆಯಲಾಗುತ್ತದೆ.

ಉತ್ತರ ಕರ್ನಾಟಕ್ಕೆ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಮದುವೆ, ಶುಭ ಕಾರ್ಯ, ಸಭೆ ಸಮಾರಂಭಗಳಿಗೆ ಇಲ್ಲಿಗೆ ಬಂದು ಭತ್ತ ಖರಿದಿಸುತ್ತಿದ್ದ ಕಾಲವೊಂದಿತ್ತು. ಆದರೆ ಭತ್ತದ ಬೆಳೆಗೆ ಬೇಕಾಗುವಷ್ಟು ಮಳೆ ಆಗದಕ್ಕೆ ಕಳೆದ 10-12 ವರ್ಷಗಳಿಂದ ಗ್ರಾಮದ ರೈತರು ಭತ್ತ ನಾಟಿ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ, ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮವಾಗಿ ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ಕಾರ್ಯ ಭರದಿಂದ ಸಾಗಿದೆ.

ರೈತರು ದೇಶದ ಬೆನ್ನೆಲುಬು ಅವರು ದುಡ್ಡಿದರೆ ಮಾತ್ರ ದೇಶದ ಜನತಕ್ಕೆ ಊಟ ಎಂದು ಹೇಳುತ್ತಾರೆ, ಆದರೆ ರೈತರು ಬಿತ್ತುವ ಬೆಳೆಗೆ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಅವರು ನಷ್ಟವನ್ನು ಹೋಂದುತ್ತಾರೆ. ಭತ್ತ ನಾಟಿ ಮಾಡಲು ಬೀಜ ಹಾಕಿದ್ದು ಸಸಿಗಳು ಫಲವತ್ತಾಗಿ ಬೆಳೆದಿವೆ, ಹೀಗಾಗಿ ಬಹುತೇಕ ರೈತರು ನಾಟಿ ಕಾರ್ಯ ಆರಂಭಿಸಿದ್ದಾರೆ.

‘ಹಲವು ವರ್ಷಗಳಿಂದಭತ್ತದ ಬೆಳೆಯಿಂದ ವಂಚಿತರಾಗಿದ್ದ ನಮಗೆ ಈ ಹಂಗಾಮಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ್ಳೆಯ ಫಸಲು ಪಡೆಯುವ ನಿಟ್ಟಿನಲ್ಲಿ ಭೂತಾಯಿಯನ್ನು ನಂಬಿ ಭತ್ತ ನಾಟಿಗೆ ಅಣಿಯಾಗಿದ್ದೆವೆʼ ಎಂದು ಗ್ರಾಮದ ಜನರು ತಿಳಿಸಿದ್ದಾರೆ.

ಭತ್ತ ನಾಟಿ ಮಾಡಲು ಕೃಷಿ ಕಾರ್ಮಿಕರ ಕೂಲಿ ಹೆಚ್ಚಾಗಿದೆ, ಕೇವಲ ಮಳೆಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಫಸಲು ಬರುವವರೆಗಿನ ಸವಾಲುಗಳು ಎದುರಿಸಲು ಗಟ್ಟಿ ನಿರ್ಧಾರ ಮಾಡಿ ನಾಟಿಕಾರ್ಯ ಆರಂಭಿಸಲಾಗಿದೆ’ ಎಂದು ತಿಳಿಸಿದ್ದಾರೆ.

ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳ ಬೆಲೆಯೂ ಹೆಚ್ಚಾಗಿದೆ, ಫಸಲು ಬಂದ ಮೇಲೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಲಭಿಸಿದಾಗ ಮಾತ್ರ ಭತ್ತ ಬೆಳೆದ ರೈತರ ಬದುಕು ಹಸನಾಗುತ್ತದೆ. ದಶಕದ ಕನಸು ನನಸಾಗುತ್ತದೆ, ಮತ್ತೆ ದೂರ ದೂರದ ಜನ ಗ್ರಾಮಕ್ಕೆ ಬಂದು ಭತ್ತ ಖರಿದಿಸುತ್ತಾರೆ.

Share this post

Post Comment