ಬೆಂಗಳೂರು ನಗರವನ್ನು ಹಲವು ಹೆಸರುಗಳಿಂದ ಕೆರೆಯಲಾಗುತ್ತದೆ, ಸಿಲಿಕಾನ್ ಸಿಟಿ, ಐಟಿ ಬಿಟಿ ಸಿಟಿ, ಟ್ರಾಫಿಕ್ ಸಿಟಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಕರ್ನಾಟಕ ಸರ್ಕಾರವು ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಹಲವು ನೀತಿ, ನಿಯಮಗಳನ್ನಯ ತಂದರು ಕೊಡ ಬಗೆಹಇಯಾದ ಸಮಸ್ಯೆಕೆ ಇವಾಗ ಸರ್ಕಾರವು ಡಬಲ್ ಡೆಕ್ಕರ ಫ್ಲೈ ಓವರ್ ಚಾಲನೆ ಮಾಡಲು ಮುಂದುವರಿದಿದೆ.
ವಾಹನ ಸವಾರರ ದುಃಸ್ವಪ್ನವಾಗಿದ್ದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನ ಟ್ರಾಫಿಕ್ ಜಾಮ್ ಶೀಘ್ರದಲ್ಲಿಯೇ ಅಂತಿಮಗೋಳಲಿದೆ ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ ವರಗೆ ನಿರ್ಮಾಣವಾಗ್ತಿದ್ದ 3.36 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದ್ದು ಪ್ರಾಯೋಗಿಕ ಸಂಚಾರಕ್ಕೆ ರಾಜ್ಯದ ಉಪಾಧ್ಯಕ್ಷರು ಇಂದು ಚಾಲನೆ ನಿಡಲಿದ್ದಾರೆ.
ಇಂದು ನಗರದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈ ಓವರ್ ಟ್ರಯಲ್ ರನ್ ನಡೆಯಲಿದೆ. ನಗರದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಬ್ರೇಕ್ ಹಾಕಲು ಡಬಲ್ ಅಸ್ತ್ರ ಬಳಸಿದ್ದು ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಇಂದು ಚಾಲನೆ ಸಿಗಲಿದೆ. ದೇಶದ ದೊಡ್ಡ ನಗರಗಳಾದ ಮುಂಬೈ ಜೈಪುರದಲ್ಲಿ ಇದ್ದ ಡಬಲ್ ಡೆಕ್ಕರ್ ವ್ಯವಸ್ಥೆ ಇನ್ಮುಂದೆ ಸಿಲಿಕಾನ್ ಸಿಟಿಯಲ್ಲೂ ಇರಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಾಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಡಿಸಿಎಂಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮತ್ತು ಶಾಸಕರು ಸಾಥ್ ಹಾಗೂ ಆನೇಕ ಗಣ್ಯರು ಭಾಗಿಯಾಗಲಿದ್ದಾರೆ.
ಬಹು ನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈ ಓವರ್ 3.36 ಕಿಲೋ ಮೀಟರ್ ಉದ್ದವಿದೆ. ಇದು ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಾಣವಾಗಿದೆ. 449 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್, ರಾಗಿಗುಡ್ಡ -ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ. ರಾಗಿಗುಡ್ಡದಿಂದ ಇನ್ಮುಂದೆ ಸಿಗ್ನಲ್ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಪ್ರಯಾಣಿಸಲು ಅವಕಾಶ ಸಿಗಲಿದೆ.
ಈ ಡಬಲ್ ಡೆಕ್ಕರ್ ಫ್ಲೈಒವರ್ನಲ್ಲಿ ಮೆಟ್ರೋ ರೈಲು ಹಾಗೂ ವಾಹನ ಸಂಚರಿಸುತ್ತೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ. ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೇನ್ ಹಾದು ಹೋಗಿದೆ. ಎಚ್ಎಸ್ಆರ್ ಲೇಔಟ್ ಹಾಗೂ ಹೊಸುರ್ ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಬಹುದು.
ಈ ಡಬಲ್ ಡೆಕ್ಕರ್ ನಿಂದ ಜನೆರಿಗೆ ಆಗುವ ಪ್ರಯೋಜನೆಗಳು
• ರಾಗಿಗುಡ್ಡ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆ ನಿವಾರಣೆ
• ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರ
• ರಾಗಿಗುಡ್ಡದಿಂದ ಪ್ರಯಾಣಿಸುವವರು ಇನ್ನು ಮುಂದೆ ಸಿಗ್ನಲ್ ಇಲ್ಲದೆ ಪ್ರಯಾಣ
• ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಆರಾಮಾಗಿ ಪ್ರಯಾಣಿಸಬಹುದು
• ಏಟಿ ಮತ್ತು ಇತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.