ಬೀದರ್ : ನಗರದ SRS ಫಂಕ್ಷನ್ ಹಾಲ್ ನಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಫರ್ಧೆ ಏರ್ಪಡಿಸಲಾಗಿದ್ದು, ನಗರದ ವಿವಿಧ ಶಾಲೆಗಳ 450 ಕ್ಕೂ ಅಧಿಕ ಮಕ್ಕಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಕ್ಲಬ್ ನ ಕಾರ್ಯದರ್ಶಿ ಪೂಜಾ ಜಾರ್ಜ್ ತಿಳಿಸಿದ್ದಾರೆ.
ಇದೇ ವೇಳೆ ಮಾತಾನಾಡಿದ ಜಂಟಿ ಕಾರ್ಯದರ್ಶಿ ಸ್ಫೂರ್ತಿ ಧನ್ನೂರ್ ನಮ್ಮ ದೇಶದಲ್ಲಿ ನಸಿಸುತ್ತಿರುವ ಅರಣ್ಯ ಪ್ರದೇಶವನ್ನು ಮತ್ತು ಇಂದಿನ ಜನತೆಗೆ ಪರಿಸರ ಜಾಗೃತಿ ಮತ್ತು ಮರಗಳನ್ನು ನೆಡುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಬರೀದ್ ಶಾಹಿಯಿಂದ ಕನ್ನಾಂಡಾಬೆ ರೋಟರಿ ವೃತ್ತದ ವರೆಗೆ ವೃಕ್ಷೋತ್ಥಾನ ವಾಕ್ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸಿವಂತೆ ಮನವಿ ಮಾಡಿದ್ರು…
ನಿನ್ನೆ ಭಾನುವಾರ ಎಲ್ಲಾ ರೋಟರಿಗಳ ಸಹಯೋಗದಲ್ಲಿ ನಡೆದ ಚಿತ್ರಕಲಾ ಸ್ಫರ್ಧೆ ಬೆಳ್ಳಿಗೆ 10 ಗಂಟೆಗೆ ಪ್ರಾರಂಭವಾಗಿದ್ದು,ಸ್ಫರ್ಧೆಯಲ್ಲಿ ಭಾಗಿಯಾಗಿದ ಮಕ್ಕಳಿಗೆ ನವೀನ್ ಗೋಯಲ್ ಮತ್ತು ಭಾವೇಶ ಪಟೇಲ್ ಪೇಟಿಂಗ್ ಕಿಟ್ ಗಳನ್ನು ನೀಡಿದ್ದು ,ವಿಜೇತರಿಗೆ ಅಗಸ್ಟ್ 25ರಂದು ನಡೆಯುವ ಸೆಮಿನಾರ್ ನಲ್ಲಿ ನಗದು ಬಹುಮಾನ ಮತ್ತು ಪದಕಗಳನ್ನು ನೀಡಲು ನಿರ್ಧರಿಸಿದ್ದು ಇದರ ಪ್ರಾಯೊಕತ್ವವನ್ನು ಅನಂದ್ ಕೋಟಾರ್ಕಿ ವಹಿಸಿಕೊಂಡಿದ್ದು,ಸ್ಫರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಖಜಾಂಚಿ ಅಮಯ್ ಸಿಂಧೋಲ್ ಉಟ-ಉಪಹಾರದ ವ್ಯವಸ್ಥೆಯನ್ನು ಮತ್ತು ಉಪಾಧ್ಯಕ್ಷ ಅದೀಶ್ ಅರ್ ವಾಲಿಯವರು ಫೆಲೋಶಿಪ್ ಮಾಡಿದ್ರು
ಅಗಸ್ಟ್ 24ಕ್ಕೆ ನಗರದಲ್ಲಿ ವೃಕ್ಷೋತ್ಥಾನ
ರೋಟರಿ ಕಲ್ಯಾಣ ವಲಯದ ವತಿಯಿಂದ ಅಗಸ್ಟ್ 24ಕ್ಕೆ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಮರಗಳನ್ನು ನೆಡುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವೃಕ್ಷೋತ್ಥಾನ ಹಮ್ಮಿಕೊಂಡಿದ್ದು,ಇದರ ಪ್ರಯುಕ್ತ ನಿನ್ನೆ ಚಿತ್ರಕಲಾ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು,ಮೂರು ರೋಟರಿಗಳು ಚಿತ್ರಕಲೆಗಳ ಮೌಲ್ಯಮಾಪನ ಮಾಡಲಿದ್ದು, ಅಂದು ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣವನ್ನು ವಿತರಿಸಲಾಗುವುದು ಎಂದು ಕ್ಲಬ್ ನ ಸಲಹೆಗಾರರಾದ ಬಸವರಾಜ್ ಧನ್ನೂರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸದಸ್ಯತ್ವ ಸೆಮಿನಾರ್ ಸಭೆಯ ಅಧ್ಯಕ್ಷರಾದ ಹಾವಶೆಟ್ಟಿ ಪಾಟೀಲ್ ,ರೋಟರಿ ಕ್ಲಬ್ ನ ಉಪಾಧ್ಯಕ್ಷರಾದ ಅದೀಶ್ ಅರ್ ವಾಲಿ, ಕಾರ್ಯದರ್ಶಿ ಪೂಜ್ ಜಾರ್ಜ,ಜಂಟಿ ಕಾರ್ಯದರ್ಶಿ ಸ್ಫೂರ್ತಿ ಧನ್ನೂರ್ ,ಖಜಾಂಚಿ ಅಮೆ ಸಿಂಧೋಲ್ ,ನಿರ್ದೇಶಕರಾದ ಗುರು ಸಿಂಧೋಲ್ ,ಭಾವೇಶ ಪಟೇಲ್ ,ಮಂಜುನಾಥ್ ಹೂಗಾರ್ ,ಸಹನಾ ಪಾಟೀಲ್,ಪೂಜಾ ಕೊಂಡಿ,ಕೀರ್ತಿ ವಾಲೆ ,ಲವನೀತ್ ಸಿಂಗ್ ,ಸದಸ್ಯರಾದ ನವೀನ್ ಗೋಯಲ್ ,ಅನಂದ ಕೋಟಾರ್ಕಿ,ಸುರೇಂದ್ರ ಸಿಂಧೋಲ್ ,ಮಹೇಶ ಚಿಮ್ಮಕೋಡೆ,ಅಂಬರೀಶ್ ಅಂಬಿ ಸಾಂಗೆ,ನಿಖಿಲ್ ಗಂಗಶೆಟ್ಟಿ,ಕಿರಣ ಸ್ಯಾಮುವೇಲ್ ,ಗಣೇಶ್ ಪಾಟೀಲ್ ,ಪ್ರಸನ್ನ ಸಿಂಧೋಲ್,ಸಹಾಯಕ್ ಕ್ಲಬ್ ಗೌವರ್ನರ್ ಸೂರ್ಯಕಾಂತ್ ರಾಮಶೆಟ್ಟಿ,ರವಿ ಮೂಲಗೆ,ಸಚ್ಚಿನಂದಾ ಚಿದ್ರೆ,ಉಪಸ್ಥಿತರಿದ್ದರು …