ಕಲಬುರಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ಮುಡಾದಲ್ಲಿ ಏನು ಅಕ್ರಮ ಆಗಿದೆ ಅನ್ನೊದರ ಬಗ್ಗೆ ಬಿಜೆಪಿಯವರು ಸ್ಪಷ್ಟವಾಗಿ ಹೇಳಬೇಕು. ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ಯಾವುದೇ ಪಾತ್ರ ಇಲ್ಲ, ಪಾತ್ರ ಇಲ್ಲ ಅಂದಮೇಲೆ ರಾಜೀನಾಮೆ ಯಾಕೆ ಕೇಳ್ತಿದಾರೋ ಗೋತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾಗ ರಾಜೀನಾಮೆ ನೀಡಿರಲಿಲ್ಲ. ಇಂದು ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.