ಬೀದರ್ ನಲ್ಲಿ ವೃಕ್ಷಥಾನ್ ವಾಕ್ ,ಹಲವು ಗಣ್ಯರು ಭಾಗಿ | ಭೂಮಿ ತಾಯಿಯ ಋಣ ತೀರಿಸೋಣ : ಬಸವರಾಜ್ ಧನ್ನೂರ್

ಬೀದರ್ ನಲ್ಲಿ ವೃಕ್ಷಥಾನ್ ವಾಕ್ ,ಹಲವು ಗಣ್ಯರು ಭಾಗಿ | ಭೂಮಿ ತಾಯಿಯ ಋಣ ತೀರಿಸೋಣ : ಬಸವರಾಜ್ ಧನ್ನೂರ್

ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ಶನಿವಾರ ಆಯೋಜಿಸಿದ್ದ ವೃಕ್ಷೋಥಾನ್‌ಗೆ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಚಾಲನೆ ನೀಡಿದರು.ಬೆಳಿಗ್ಗೆ ಬರೀದ್ ಶಾಹಿ ಉದ್ಯಾನದಿಂದ ರೋಟರಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥಾ ನಡೆಯಿತು.

ವೃಕ್ಷಥಾನ್‌ ವಾಕ್‌ ನಲ್ಲಿ ನಗರದ ಹಲವು ಗಣ್ಯರು ಭಾಗವಹಿಸಿದ್ದು ಹಳ್ಳಿ ಸೊಗಡಿನ ಎತ್ತಿನ ಬಂಡಿಯಲ್ಲಿ ಗಿಡದ ಮಾದರಿಯನ್ನು ಹಲಗಿ ಜೊತೆಗೆ ನಗರದಲ್ಲಿ ವೃಕ್ಷಥಾನ್‌ ವಾಕ್‌ ಜರುಗಿದ್ದು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದುಉತ್ತಮ ಜೀವನವನ್ನು ನಡೆಸಲು ಒಳ್ಳೆಯ ಪರಿಸರದ ಅಗತ್ಯವಿದೆ,ಲಕ್ಷಗಳ ಸಸಿಗಳನ್ನು ನೆಡುವ ಬದಲು ಸಾವಿರ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಮಕ್ಕಳಿಗೆ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿಯವರು ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಜ್ಞಾ ವಿಧಿಯನ್ನು ಭೋದಿಸಿದ್ರು 

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ರೋಟರಿ 3160 ಗರ್ವನರ್‌ ಸಾಧು ಗೋಪಾಲ್‌ ಕೃಷ್ಣ ಮಾತಾನಾಡಿ ವೃಕ್ಷೋ ರಕ್ಷಿತೋ ರಕ್ಷಿತಹ ಎಂಬ ವಾಕ್ಯವನ್ನು ಪ್ರತಿ ಮನೆಗೂ ಕೊಂಡ್ಯೋಯುವ ಕಾರ್ಯವನ್ನು ಮಾಡೋಣ, ಮುಂದಿನ ಪೀಳಿಗೆಗಾಗಿ ಮರ ನೆಡೋಣ ಎಂದು ಹೇಳಿದರು.

 

ವೃಕ್ಷಥಾನ್‌ ಮಾಡುವುದರ ಹಿಂದಿನ ಮುಖ್ಯ ಉದ್ದೇಶ ಸರಕಾರ ಮತ್ತು ಕೇವಲ ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಣೆ ಸಾ‍‍ಧ್ಯವಿಲ್ಲ,ಜವಾಬ್ದಾರಿಯುತ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ,ಪ್ರತಿಯೊಬ್ಬರು ಭೂಮಿ ತಾಯಿಯ ಋಣ ತೀರಿಸಬೇಕು ,ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಬೀದರ್‌ ಅನ್ನು ಮಲೆನಾಡಿನ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ …..
ಬಸವರಾಜ್‌ ‍ಧನ್ನೂರ್‌ ,ವೃಕ್ಷಥಾನ್‌ ಸಮಿತಿ ಅಧ್ಯಕ್ಷರು

ರೋಟರಿ ಪದಾಧಿಕಾರಿಗಳು ಸಸಿ ಬೆಳೆಸಿ- ಪರಿಸರ ಉಳಿಸಿ, ಕಾಡು ಬೆಳೆಸಿ – ನಾಡು ಉಳಿಸಿ, ಸೇರಿದಂತೆ ವಿವಿಧ ಘೋಷಣೆ ಕೂಗಿದರು.ಒಂದು ಸಾವಿರಕ್ಕೂ ಹೆಚ್ಚು ಉತ್ತಮ ತಳಿಯ ಸಸಿಗಳನ್ನು ವಿತರಿಸಿದರು.ಕಾರ್ಯಕ್ರಮದ ಸ್ವಾಗತವನ್ನು ಪ್ರಗತಿ ಜಿಲ್ಲಾ ವಿಚಾರ ಸಂಕಿರಣ ಅಧ್ಯಕ್ಷರಾದ ಹಾವಶೆಟ್ಟಿ ಪಾಟೀಲ ನೇರೆವೆರಿಸಿದ್ದರು ,ಕಸಾಪ ಜಿಲ್ಲಾ‍‍ಧ್ಯಕ್ಷ ಸುರೇಶ ಚೆನ್ನಶೆಟ್ಟಿ ನಿರೂಪಿಸಿದ್ರು…

 

ಬೀದರ್‌ ನಗರದಲ್ಲಿ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನೋಡಿ ಖುಷಿಯಾಯಿತು, ಈ ತರಹದ ಕಾರ್ಯಕ್ರಮಗಳು ಪ್ರತಿ ನಗರ ಮತ್ತು ಹಳ್ಳಿಗೆ ತಲುಪಬೇಕು ಮತ್ತು ಅರಣ್ಯ ಉಳಿವಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು

ಪ್ರದೀಪ್‌ ಗುಂಟಿ ,ಜಿಲ್ಲಾ ಪೋಲಿಸ್‌ ವರಷ್ಠಾಧಿಕಾರಿಗಳು

 

 

 

 

Bidar silver star rotary members
ಈ ಕಾರ್ಯಕ್ರಮದಲ್ಲಿಹೆಚ್‌ ಕೆ ಇ ಸೋಸೈಟಿ ನಿರ್ದೇಶಕರಾದ ರಜನೀಶ್‌ ವಾಲಿ, ಜಿಎನ್‌ ಡಿ ಸಂಸ್ಥೆಯ ಪ್ರಮುಖರಾದ ಬಲಬೀರ್‌ ಸಿಂಗ್‌, ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯ ಅಧ್ಯಕ್ಷರಾದ ಬಿಜಿ ಶೆಟಕಾರ್‌,ಪುನೀತಾ ಸಿಂಗ್‌ ,ಅದೀಶ ಅರ್‌ ವಾಲಿ,ಪೂಜಾ ಜಾರ್ಜ್‌,ಸ್ಫೂರ್ತಿ ಧನ್ನೂರ್‌
ಉಲ್ಲಾಸ ಕಟ್ಟಿಮನಿ,ಸೋಮಶೇಖರ್ ಪಾಟೀಲ್ ,ನಾಗರಾಜ ಕರ್ಪೂರ್ , ಡಾ. ರಘು ಕೃಷ್ಣಮೂರ್ತಿ,ಡಾ. ಕಪಿಲ್ ಪಾಟೀಲ್,ಗುಂಡಪ್ಪ ಘೋಡೆ,ಕ್ರಪಸಿಂಧು ಪಾಟೀಲ್, ಅನಂದ ಕುಲಕರ್ಣಿ,ಮಂಜುನಾಥ್‌ ಹೂಗಾರ,ಅನಂದ ಕೋರ್ಟಾಕಿ,ಗುರು ಸಿಂಧೋಲ್‌,ಶ್ರೀ ನಾಥ್‌ ನಾಗೂರೆ,ನವಿನ್‌ ಗೊಯಲ್‌,ಭಾವೇಶ್‌ ಪಟೇಲ್‌,ಗಣೇಶ ಪಾಟೀಲ್‌,ಪ್ರಸನ್ನ ಸಿಂಧೋಲ್‌,ಮಂಜುನಾಥ ಖೂಬಾ,ಡಾ ಸಂಗಮೇಶ ವಡಗಾಂವೆ,ಸಹನಾ ಪಾಟೀಲ್‌ ,ಅಶೋಕ್‌ ಹೆಬ್ಬಾಳೆ,ಕೀರ್ತಿ ವಾಲೆ,ಬಸವಪ್ರಸಾದ್‌,ವೈಭವ ಬದಬದೆ,ಅಭಿಷೇಕ್‌ ಪೋಲಾ,ರಾಘವೇಂದ್ರ ರೆಜೆಂತಲ್‌,ಅಮರೀಶ್‌ ಅಮಿಸಾಂಗೆ,ಮಹೇಶ ಚಿಮಕೋಡೆ,ಕೃಷ್ಣ ಪಸರಗೆ,ನವನೀತ್‌ ಸಿಂಗ್‌,ಚೆನ್ನಬಸವ ,ವೆಂಕಟೇಶ ಎರಮಲ್ಲಿ ಸೇರಿದಂತೆ ಕಲ್ಯಾಣ ವಲಯದ ಪ್ರಮುಖ ರೋಟರಿ ಕ್ಲಬ್‌ ಗಳ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ರು…

Share this post

Post Comment