ರಾಜ್ಯದೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೃಷ್ಣ ದೇಗುಲಗಳಲ್ಲಿ ಇಂದು ವಿಶೇಷ ಪೂಜೆ ಹಾಗೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತದೆ. ಬೆಂಗಳೂರಿನ ಇಸ್ಕಾನ ಟೆಂಪಲ್ ಹಾಗೂ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಸ್ಥಾನ ದೇಶದ ಪ್ರಸಿದ್ಧ ಕೃಷ್ಣನ ದೇಗುಲಗಳಲ್ಲಿ ಒಂದಾಗಿದೆ. ಇಲ್ಲಿ ಕೃಷ್ಣಾಷ್ಟಮಿ ದಿನವಾದ ಇಂದು ಅದ್ದೂರಿ ಆಚರಣೆಗಳು ನಡೆಯುತ್ತದೆ. ಕೃಷ್ಣ ಪೂಜೆಯೊಂದಿಗೆ ಹಾಡು, ನೃತ್ಯ, ಭಜನೆ, ಕೀರ್ತನೆ ನೆರವೇರುತ್ತದೆ. ಬಂದಂತಹ ಅಪಾರ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ. ಹಾಗೆಯೇ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಕೃಷ್ಣನ ಆರಾಧನೆ ನಡೆಯುತ್ತದೆ.
ಮಧ್ಯಾಚಾರ್ಯರು ಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಇಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದು. ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಈ ದಿನವೀಡಿ ಕೃಷ್ಣಾಷ್ಟಮಿ ಆಚರಣೆ ಸಂಭ್ರಮದಿಂದ ನಡೆಯುತ್ತದೆ. ಈ ಹಬ್ಬವನ್ನ ಗೋಕುಲಾಷ್ಟಮಿ, ಕೃಷ್ಣಾಷ್ಟಮಿ, ಜನ್ಮಾಷ್ಟಮಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ದೇವಲಾಯಗಳಲ್ಲಿ ಭಜನೆ, ಕೀರ್ತನೆಗಳು ನಡೆಯುತ್ತೆ. ಇನ್ನು ಭಕ್ತರು ಈ ದಿನ ಉಪವಾಸವನ್ನೂ ಕೈಗೊಳ್ಳುತ್ತಾರೆ.