ಬೀದರ್ : ಸೆಪ್ಟೆಂಬರ್ 5 ರಂದು ನಗರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಗಮಿಸುತ್ತಿರುವ ಪ್ರಯುಕ್ತ ಹಮ್ಮಿಕೊಂಡ ಬಹೃತ್ ಸಮಾವೇಶದ ಹಿನ್ನಲೆ ಸರಿ ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು,ಇಂದು ಭೂಮರಡ್ಡಿ ಕಾಲೇಜು ಮೈದಾನದಲ್ಲಿ ಬಹೃತ್ ಸಭಾ ಮಂಟಪದ ನಿರ್ಮಾಣಕ್ಕೆ ಹೆಚ್ ಕೆ ಇ ಸಂಸ್ಥೆಯ ನಿರ್ದೇಶಕರಾದ ಡಾ ರಜನೀಶ್ ವಾಲಿ ಹಾಗೂ ಧರ್ಮಸ್ಥಳದ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿರೋಪಾಕ್ಷ ಗಾದಗಿ ಗುದ್ದಲಿ ಪೂಜೆ ನೇರೆವೇರಿಸಿ,ಸಿದ್ದತೆಗಳನ್ನು ಪ್ರಾರಂಭಿಸಿದ್ದರು..
ಈ ಸಂದರ್ಧದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ಯ ವಿಭಾಗೀಯ ನಿರ್ದೇಶಕ ಜಯಂತ ಕಾಯ್ಕಣಿ, ಬೀದರ್ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಯೋಜನಾಧೀಕಾರಿಗಳಾದ ಸಂಜಯ್, ಧರ್ಮೇಂದ್ರ, ಇನ್ನಿತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

ಸೆಪ್ಟೆಂಬರ್ 5 ರಂದು ಡಾ ವಿರೇಂದ್ರ ಹೆಗ್ಗಡೆ ಇವರು ಬೀದರ್ ನಗರಕ್ಕೆ ಅಗಮಿಸುತ್ತಿದ್ದು ಸರಿ ಸುಮಾರು 10 ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದ್ದು ,ಬರುವ ಎಲ್ಲಾ ಅನುಯಾಯಿಗಳಿಗೆ ಅಗಸದ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು ,ಇಂದಿನ ಎಲ್ಲಾ ಸಿದ್ದತೆಗಳನ್ನು ಪ್ರಾರಂಭಿಸಲಾಗಿದೆ..
ವಿರೋಪಾಕ್ಷ ಗಾದಗಿ, ಧರ್ಮಸ್ಥಳದ ಜನಜಾಗೃತಿ ವೇದಿಕೆಯ ಅಧ್ಯಕ್ಷ