ಹಿರಿಯ ಐಪಿಎಸ್ ಅಧಿಕಾರಿ ಬಿ. ಶ್ರೀನಿವಾಸನ್ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿದೆ. ಶ್ರೀನಿವಾಸನ್ ಅವರು ಬಿಹಾರ ಕೆಡರ್ ನ 1992ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.
‘ಶ್ರೀನಿವಾಸನ್ ಅವರನ್ನು ಎನ್‌ಎಸ್‌ಜಿ ಮಹಾ ನಿರ್ದೇಶಕರನ್ನಾಗಿ ನೇಮಿಸಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.
ಅವರ ಅಧಿಕಾರ ಅವಧಿಯು 2027ರ ಆಗಸ್ಟ್ 31ರ ವರೆಗೆ ಇರಲಿದೆ’ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಿದೆ.
ಕ್ಯಾಬಿನೆಟ್ನ ನೇಮಕಾತಿ ಸಮಿತಿಯು ಶ್ರೀನಿವಾಸನ್ ಅವರನ್ನು ಎನ್‌ಎಸ್ ಜಿಯ ಮಹಾನಿರ್ದೇಶಕರಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ, ಈ ಹುದ್ದೆಗೆ ಸೇರ್ಪಡೆಗೊಂಡ ದಿನಾಂಕದಿಂದ ಮತ್ತು ಆಗಸ್ಟ್ 31, 2027 ರವರೆಗೆ ಶ್ರೀನಿವಾಸನ್ ಎನ್‌ಎಸ್ ಜಿಯ ಮಹಾನಿರ್ದೇಶಕರಾಗಿರಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.