ಅಪಾಯಕಾರಿ ಭೂಗತ ಅಪರಾಧಿಗಳೊಂದಿಗೆ ನಟ ದರ್ಶನ್ ಒಡನಾಟ ಹೊಂದಿದ್ದಾರೆ ಎಂದು ನಟ ಚೇತನ್ ಅಹಿಂಸ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ರೌಡಿಗಳೊಂದಿಗಿನ ದರ್ಶನ್ರ ಚಿತ್ರವನ್ನು ಸಮರ್ಥಿಸಿಕೊಂಡ ಸುಮಲತಾ ‘ಕ್ರಿಮಿನಲ್ಸ್ ಹೊರತುಪಡಿಸಿ ಬೇರೆ ಯಾರು ಜೈಲಿನಲ್ಲಿದ್ದಾರೆ’ ಎಂದು ಹೇಳಿದ್ದಾರೆ.
ಸೆರೆವಾಸಕ್ಕೊಳಗಾದವರ ಅಪರಾಧಗಳಲ್ಲಿ ಕಾನೂನುಬಾಹಿರತೆ ಮತ್ತು ಅನೈತಿಕತೆಯ ವಿವಿಧ ಮಟ್ಟಗಳು ಅಸ್ತಿತ್ವದಲ್ಲಿವೆ ಎಂಬುದು ಸುಮಲತಾಗೆ ಅರ್ಥವಾಗಿಲ್ಲ
ಅನೇಕರು ಸಣ್ಣ ಕಳ್ಳತನ ಅಥವಾ ಲಂಚದ ಆರೋಪಗಳಿಂದಾಗಿ ಜೈಲಿನಲ್ಲಿದ್ದರೆ, ಇತರರು ಘೋರ ಕೊಲೆ ಮತ್ತು ಅತ್ಯಾಚಾರ ಆರೋಪಗಳಿಂದಾಗಿ ಜೈಲಿನಲ್ಲಿದ್ದಾರೆ. ಕೆಲವು ಅತ್ಯಂತ ಅಪಾಯಕಾರಿ ಭೂಗತ ಅಪರಾಧಿಗಳೊಂದಿಗೆ ಒಡನಾಟ ಹೊಂದಿರುವುದು ದರ್ಶನ್ ಬಗ್ಗೆ ಸಾಕಷ್ಟು ಹೇಳುತ್ತದೆ ಎಂದು ಹೇಳಿದ್ದಾರೆ.