ಬೀದರ್‌ ಕೋಟೆಯಲ್ಲಿ ಗಮನ ಸೆಳೆದ  ಏರ್‌ ಶೋ   | ಹಾರಿದ ಸೂರ್ಯಕಿರಣ ಗಡಿ ಮಂದಿಯಲ್ಲಿ ಸಂಭ್ರಮ

ಬೀದರ್‌ ಕೋಟೆಯಲ್ಲಿ ಗಮನ ಸೆಳೆದ  ಏರ್‌ ಶೋ   | ಹಾರಿದ ಸೂರ್ಯಕಿರಣ  ಗಡಿ ಮಂದಿಯಲ್ಲಿ ಸಂಭ್ರಮ
  • ಬೀದರ್‌ ಕೋಟೆಯಲ್ಲಿ ಗಮನ ಸೆಳೆದ  ಏರ್‌ ಶೋ   
  • ಹಾರಿದ ಸೂರ್ಯಕಿರಣ ಗಡಿ ಮಂದಿಯಲ್ಲಿ ಸಂಭ್ರಮ
  • ನಗರದ ಹಲವರಿಂದ ಏರ್‌ ಶೋ ವೀಕ್ಷಣೆ

ಬೀದರ್: ನಗರದ ಬಹಮನಿ ಕೋಟೆಯ ಮೇಲೆ ಆಗಸ್ಟ್ 30, 31ರಂದು ಏರ್ ಶೋ ಕಾರ್ಯಕ್ರಮ ಭಾರತೀಯ ವಾಯುಪಡೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.ಇಂದು  ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಕೋಟೆಯಲ್ಲಿ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 3ಗಂಟೆಗೆ ಸಾರ್ವಜನಿಕರು ಕೋಟೆ ಒಳಗಡೆ ನಿಗದಿತ ಸ್ಥಳದಲ್ಲಿ ಹಾಜರಾಗಿ ಏರ್ ಶೋ ವೀಕ್ಷಿಸಿದ್ದಾರೆ.

ಸೂರ್ಯಕಿರಣ ತಂಡದ ವತಿಯಿಂದ ಏರ್‌ ಶೋ ಕಾರ್ಯಕ್ರಮ ನಡೆದಿದ್ದು,ಲೋಹದ ಹಕ್ಕಿಗಳು ಆಗಸದಲ್ಲಿನ ವೈಮಾನಿಕ ಪ್ರದರ್ಶನವೂ ನೋಡುಗರಿಗೆ ರೋಮಾಂಚನ ಹಾಗೂ ಮನವಿರೇಳಿಸುವಂತೆ ಜನರನ್ನ ಆಕರ್ಷಿಸಿವೆ.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ,ಎಸ್‌ ಪಿ ಪ್ರದೀಪ್‌ ಗುಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Share this post

Post Comment