- ಧಾರಾಕಾರ ಮಳೆ, ಗೋಡೆ ಕುಸಿತ…
- ಜೋಜನಾ ಗ್ರಾಮದಲ್ಲಿ ಮನೆ ಗೋಡೆ ಕುಸಿತ…
- ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜೋಜನಾ ಗ್ರಾಮ…
- ಚನ್ನಬಸಪ್ಪ ಡಿಗ್ಗಿ ಎಂಬುವವರಿಗೆ ಸೇರಿದ ಮನೆ ಕುಸಿತ…
ಬೀದರ್: ಜಿಲ್ಲೆಯಾದ್ಯಂತ ಶನಿವಾರ ಬೆಳ್ಳಿಗೆಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಭಾನುವಾರ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಹಗಲು-ರಾತ್ರಿಯೆನ್ನದೆ ಸುರಿಯುತ್ತಿರುವ ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ಬೆಳಿಗ್ಗೆ ಆರಂಭಗೊಂಡ ಮಳೆ ಸಂಜೆ ವೇಳೆಗೆ ಬಿರುಸುಗೊಂಡಿತು.
ಇಂದು ಕೂಡ ಒಂದೇ ಸಮ ಸುರಿಯುತ್ತಿದೆ. ಭಾನುವಾರ ರಜಾ ದಿನ ಹಾಗೂ ಜೋರಾಗಿ ಮಳೆ ಸುರಿಯುತ್ತಿರುವ ಕಾರಣ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿದೆ.ಇನ್ನೊಂದೆಡೆ ಸಾರ್ವಜನಿಕ ಗಣೇಶ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದವರಿಗೆ ವರುಣ ಈ ಸಲ ಅಡ್ಡಿಯಾಗಿದ್ದಾನೆ, ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಹುಲಸೂರ, ಕಮಲನಗರ, ಔರಾದ್, ಚಿಟಗುಪ್ಪ, ಹುಮನಾಬಾದ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ..