- 18 ವರ್ಷದ ಯುವತಿ ಭೀಕರ ಕೊಲೆ ,ಮೂರು ದಿನಗಳ ಬಳಿಕ ಶವ ಪತ್ತೆ
- ಗುಂಡೂರ ಗ್ರಾಮದ ಭಾಗ್ಯ ಶ್ರೀ (18) ಕೊಲೆಯಾದ ಯುವತಿ
- ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥವಾಡಿಯಲ್ಲಿ ಘಟನೆ
- ಶಾಲೆ ಪಕ್ಕದ ಮುಳ್ಳಿನ ಪೋದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
- ಘಟನೆ ತಿಳಿದು ಪೋಲಿಸ್ ಅಧಿಕಾರಿಗಳು ಸ್ಥಳ,ಭೇಟಿ ಪರಿಶೀಲನೆ
ಬೀದರ್ : ಯುವತಿಯೊಬ್ಬಳ್ಳನ್ನು ಭೀಕರವಾಗಿ ಕೊಲೆ ಮಾಡಿ ಮುಳ್ಳು ಕಂಟಿಯಲ್ಲಿ ಶವ ಬಿಸಾಡಿಹೋದ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಜರುಗಿದೆ.ಮೂಲತ: ತಾಲೂಕಿನ ಗುಂಡೂರ ಗ್ರಾಮದ ಭಾಗ್ಯಶ್ರೀ (18) ವರ್ಷ ಕೊಲೆಯಾದ ಯುವತಿಯಾಗಿದ್ದಾಳೆ.
ಈಕೆಯ ಪಾಲಕರು ಕಳೆದ ಕೆಲ ವರ್ಷಗಳಿಂದ ಗುಣತೀರ್ಥವಾಡಿ ಗ್ರಾಮದಲ್ಲಿ ಉಳಿದು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತ ಇಲ್ಲೆ ನೆಲೆಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರಾತ್ರಿ ವೇಳೆ ಈಕೆ ಮನೆಯಿಂದ ನಾಪತ್ತೆಯಾಗಿದ್ದು, ಭಾನುವಾರ ಬೆಳಗ್ಗೆ 11ರ ಸುಮಾರಿಗೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದ ಮುಳ್ಳಿನ ಪೋದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಯುವತಿ ಶವ ಬಹುತೇಕ ವಿವಸ್ತ್ರವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದು ಎನ್ನುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಸುದ್ದಿ ತಿಳಿದ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶಟ್ಟಿ, ಸಿಪಿಐಗಳಾದ ಅಲಿಸಾಬ್, ಕೃಷ್ಣಕುಮಾರ್ ಪಾಟೀಲ, ಶ್ರೀನಿವಾಸ ಅಲ್ಲಪೂರ, ಪಿಎಸ್ಐಗಳಾದ ಅಂಬ್ರೀಷ್ ವಾಗ್ಮೋಡೆ, ಸುವರ್ಣ ಮಲಶಟ್ಟಿ ಸೇರಿದಂತೆ ವಿಧಿವಿಜ್ಞಾನ ಇಲಾಖೆ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ ಘಟನಾ ಸ್ಥಳಕ್ಕೆ ಧಾವಿಸಿ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವರದಿ : ಕ್ರೈಮ್ ಬ್ಯೂರೋ ಬೀದರ್