ಕನ್ನಡ ಭಾಷೆಯಲ್ಲಿ ಓದಿದವರು ದೋಡ್ಡ ಸ್ಥಾನ ಪಡೆದಿದ್ದಾರೆ : ಕುಂ. ವೀರಭದ್ರಪ್ಪ

ಕನ್ನಡ ಭಾಷೆಯಲ್ಲಿ ಓದಿದವರು ದೋಡ್ಡ ಸ್ಥಾನ ಪಡೆದಿದ್ದಾರೆ : ಕುಂ. ವೀರಭದ್ರಪ್ಪ

ಕನ್ನಡಕ್ಕೆ ಅನ್ನ ಕೊಡುವ ಶಕ್ತಿಯಿಲ್ಲ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಆದರೆ, ಅದು ತಪ್ಪು. ಅದನ್ನು ಯಾರು ಹೇಳಿದ್ದಾರೋ ಗೊತ್ತಿಲ್ಲ. ಕನ್ನಡ ಶಾಲೆ ಹಾಗೂ ಕನ್ನಡ ಭಾಷೆಯಲ್ಲಿ ಓದಿದವರು ಅನೇಕ ದೊಡ್ಡ ಸ್ಥಾನಗಳನ್ನು ಪಡೆದಿದ್ದಾರೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ಬೀದರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ. ನಾನು  ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ್ದೇನೆ. ನನ್ನಂತಹ ಅನೇಕರು ಓದಿ ದೊಡ್ಡ ಸ್ಥಾನ ಹೋಗಿದ್ದಾರೆ. ಕನ್ನಡದಲ್ಲಿ 56 ಸಂಬಂಧ ವಾಚಕಗಳಿವೆ. ಬಸವಣ್ಣ, ಅಕ್ಕಮಹಾದೇವಿ ದೊಡ್ಡ ನಾಮವಾಚಕಗಳು ಎಂದು ತಿಳಿಸಿದರು.

ಕನ್ನಡ ಶಾಲೆ ಮುಚ್ಚಿದರೆ ತಾಯಿ ಭುವನೇಶ್ವರಿ ಬಾಯಿ ಮುಚ್ಚಿದಂತೆ, ಜೀವ ತೆಗೆದಂತೆ. ಕಡಿಮೆ ಮಕ್ಕಳು ಇದ್ದರೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇಲ್ಲ ಎಂದು ಯಾವ ಮುಠ್ಠಾಳ ಹೇಳಿದ್ದಾನೋ ಗೊತ್ತಿಲ್ಲ. ಅದು ಶುದ್ಧ ಸುಳ್ಳು. ಆಂಗ್ಲ ಮಾಧ್ಯಮದಲ್ಲಿ ಓದಿದವರು ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕನ್ನಡಕ್ಕಿರುವ ಶಕ್ತಿ ಆಗಿದೆ  ಎಂದು ನುಡಿದರು.

‘ಪಾಲಕರು ವೃದ್ಧಾಪ್ಯದ ದಿನಗಳನ್ನು ಮಕ್ಕಳೊಂದಿಗೆ ಸಂತಸದಿಂದ ಕಳೆಯಬೇಕಾದರೆ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಬೇಕು. ವೃದ್ಧಾಶ್ರಮ ಸೇರಬೇಕಾದರೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು’ ಎಂದರು.

Share this post

Post Comment