ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ, ಆದರೆ ದುರಾಸೆ ಇಲ್ಲ : ಎಂ.ಬಿ ಪಾಟೀಲ್
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ರಾಜ್ಯದಲ್ಲಿ ಯಾವಾಗ ಮುಡಾ ಪ್ರಕರಣ ಭಾರಿ ಸದ್ದು ಮಾಡಿತೊ, ಅಂದಿನಿಂದಲೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಸ್ವಪಕ್ಷದ ನಾಯಕರೇ ಕಣ್ಣು ಇಟ್ಟಿದ್ದಾರೆ. ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅನುಮತಿ ನೀಡಿದರೆ ಸಿ ಎಂ ಆಗುತ್ತೇನೆ ಎಂದು ಹೇಳಿದರು.ಇದೀಗ ಸಚಿವ ಎಂಬಿ ಪಾಟೀಲ್ ಅವರು ಕೂಡ ನನಗೂ ಮುಖ್ಯಮಂತ್ರಿ ಆಗಬೇಕೆಂಬ ಇಚ್ಚೆ ಇದೆ ಆದರೆ ದುರಾಸೆ ಇಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಕೂಡ ಎಂಬಿ ಪಾಟೀಲ್ ಮುಖ್ಯಮಂತ್ರಿ ಆಗುವ ವಿಚಾರವಾಗಿ, ನಾನು ಹಿರಿಯನಿದ್ದೇನೆ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ. ಪಕ್ಷದಲ್ಲಿ ಎಂಬಿ ಪಾಟೀಲ್ ಅವರಿಗಿಂತಲೂ ಸೀನಿಯರ್ಸ್ ಇದ್ದಾರೆ ಅವರಿಗೂ ಸಿಎಂ ಆಗುವ ಆಸೆ ಇರುತ್ತೆ ಎಂದು ಹೇಳಿದರು. ಇದಕ್ಕೆ ಎಂ.ಬಿ ಪಾಟೀಲ್, ಶಿವಾನಂದ್ ಪಾಟೀಲ್ ಸಿಎಂ ಆಗಲ್ಲ ಆದರೆ ವಿಜಯಪುರದಿಂದ ಸಿಎಂ ಆಗುವುದು ನಾನೇ ಎಂದು ತಿರುಗೇಟು ಕೋಟ್ಟಿದ್ದಾರೆ.
ಪಕ್ಷದಲ್ಲಿ ನನಗಿಂತ ಹಿರಿಯರು ಇರಬಹುದು ಆದರೆ ನಾನು 1991 ರಿಂದಲೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಇಲ್ಲಿಯವರೆಗೆ ಬಂದಿದ್ದೇನೆ. ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದಿನಿ. ಅವರೆಲ್ಲ ಜೆಡಿಎಸ್ ಬಿಜೆಪಿ ಪಕ್ಷದಲ್ಲಿದ್ದು ಇತ್ತೀಚಿಗೆ ಕಾಂಗ್ರೆಸ್ಗೆ ಬಂದವರು ಎಂದು ಲೋಕಸಭಾಆಗಿ ಸಚಿವ ಶಿವಾನಂದ್ ಪಾಟೀಲ್ ಗೆ ತಿರುಗೇಟು ನೀಡಿದ್ದಾರೆ.