ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ತಪ್ಪಿದ ಬ್ಯಾಲೆನ್ಸ್ : ಈಶ್ವರ್ ಖಂಡ್ರೆ!
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ತುಂಬಿ ಹರಿಯುತ್ತಿದ್ದು, ಇಂದು ಭೇಟಿ ನೀಡಿದ ಸಚಿವ ಈಶ್ವರ್ ಖಂಡ್ರೆ ನದಿಗೆ ಬಾಗಿನ ಅರ್ಪಿಸಲು ಬಂದಿದ್ದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ ಆಯಾತಪ್ಪಿದಾರೆ.
7.69 ಸಾಮರ್ಥ್ಯದ ಕಾರಂಜಾ ಜಲಾಶಯ ಈಗಾಗಲೇ ಸುಮಾರು 93ರಷ್ಟು ಭರ್ತಿಯಾಗಿದೆ.
ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಕಾರಂಜಾ ಜಲಾಶಯಕ್ಕೆ ಸಚಿವ ಈಶ್ವರ್ ಖಂಡ್ರೆ ಬಾಗಿನ ಅರ್ಪಿಸಲು ಬಂದಿದರು. ಈ ವೇಳೆ ಜಲಾಶಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಬಾಗಿನದ ತೆಪ್ಪೆಗೆ ಟೆಂಗು ಹಾಕಲು ಮುಂದಾಗಿದಾಗ ಆಯಾತಪ್ಪಿದ ಸಚಿವರು, ಅದೃಷ್ಟವಶಾತ್ ತಕ್ಷಣಕ್ಕೆ ಹಿಂಬದಿಯಿದ್ದವರು ಕೈಹಿಡಿದರು. ಬಳಿಕ ಸುಧಾರಿಸಿಕೊಂಡ ಸಚಿವರು ಬ್ಯಾಲೆನ್ಸ್ ಮಾಡಿಕೊಂಡರು.