ಸುಧಾಕರ್ ಸವಾಲ್ ಸ್ವೀಕರಿಸಿದ : ಡಿಕೆ ಶಿವಕುಮಾರ
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಎತ್ತಿನಹೊಳೆ ಯೋಜನೆಗೆ ಈಗಾಗಲೇ ಅಧಿಕೃತ ಚಾಲನೆ ನೀಡಲಾಗಿದ್ದು, ಇದರ ನಡುವೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ, ಕೋಲಾರ-ಚಿಕ್ಕಬಳ್ಳಾಪುರಕ್ಕೆ ಇನ್ನೆರಡು ವರ್ಷಗಳಲ್ಲಿ ಯೋಜನೆಯ ನೀರು ಹರಿಸುವಂತೆ ಮಾಡಿದರೆ ನಾನು ಡಿಕೆಶಿಯವರನ್ನು ಭಗೀರಥ ಎಂದು ಕರೆಯುತೆನೆ ಎಂದು ಸಂಸದ ಸುಧಾಕರ್ ಸವಾಲು ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ, ಪ್ರೀತಿಯಿಂದ ಸವಾಲನ್ನು ಸ್ವೀಕರಿಸುವೆ. ಸುಧಾಕರ್ ಸವಾಲನ್ನು ಗೌರವದಿಂದ ಸ್ವೀಕರಿಸಿದ್ದು, ಅವರ ಮಾತು ನನ್ನ ಜವಾಬ್ದಾರಿ ಹೆಚ್ಚುವಂತೆ ಮಾಡಿದೆ. ಸಲಹೆ ಎಂದೂ ಭಾವಿಸುವೆ ಎಂದಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ಜನರ ನೀರಿನ ಸಂಕಷ್ಟ ನನಗೆ ಅರಿವಿದೆ ಎಂದು ಹೇಳಿದ್ದಾರೆ.
ಒಂದು ತಿಂಗಳಲ್ಲಿ ಕೋವಿಡ್ ವರದಿ ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ತೀರ್ಮಾನವಾದ ಕಾರಣಕ್ಕೆ ಸುಧಾಕರ್ ನಿಮ್ಮನ್ನು ಹೊಗಳುತ್ತಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ನನಗೆ ಕೋವಿಡ್ ವರದಿ ಬಗ್ಗೆ ಏನೂ ಮಾಹಿತಿ ಇಲ್ಲ. ಸಚಿವ ಸಂಪುಟ ಸಭೆಯಲ್ಲೂ ನಾನು ಭಾಗವಹಿಸಿಲ್ಲ ಎಂದು ಡಿಕೆ ಶಿವಕುಮಾರ ಅವರು ಪ್ರತಿಕ್ರಿಯೆ ನೀಡಿದ್ದಾರೆ.