ನಾಡಿನೆಲ್ಲಡೆ ವಿಘ್ನ ವಿನಾಯಕನ ಆಗಮನ
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ನಾಡಿನೆಲ್ಲೆಡೆ ವಿಘ್ನ ವಿನಾಯಕ ಗಣೇಶ ಚತುರ್ಥಿ ಸಂಭ್ರಮ ಆಸ್ಪತ್ರೆಯಲ್ಲೂ ಕಳೆಗಟ್ಟಿದ ಸಂಭ್ರನ ರೋಗಿಗಳಿಗೆ ಸಿಬ್ಬಂದಿಗಳಿಂದ ಅನ್ನಪ್ರಸಾದ.
ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಗಣಪತಿಯನ್ನು ಆಸ್ಪತ್ರೆಯಲ್ಲಿ ಪ್ರತಿಷ್ಠಾಪಿಸಿ ಸಿಬ್ಬಂದಿಗಳು ಕುಟುಂಬ ಸಮೇತರಾಗಿ ಸೇರಿಕೊಂಡು ಆಸ್ಪತ್ರೆಯಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬರುವ ರೋಗಿಗಳಿಗೆ ಹಾಗೂ ಭಕ್ತರಿಗೂ ಅನ್ನಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಿ ಬಡಿಸಿದ್ದು ವಿಶೇಷವಾಗಿತ್ತು. ಬರುವ ಭಕ್ತರಿಗೆ ಪಲಾವು ಹಾಗೂ ಕೇಸರಿಬಾತ ಲಾಡು ,ಮೊಸರ ಬಜ್ಜಿಯನ್ನು ವಿತರಣೆ ಮಾಡಿದರು .