ಶಿತಿಲಾವಸ್ಥೆಗೆ ತಲುಪಿದ ಬೃಹತ್ ಸ್ವಾಗತ ಕಮಾನು
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಕಲಬುರಗಿ ಜಿಲ್ಲಾ ಕೇಂದ್ರದ ಹೊರವಲಯದ ಕಲಬುರಗಿ-ಅಫಜಲಪುರ ಹೆದ್ದಾರಿಯಲ್ಲಿರುವ ಮಾಹಿತಿಯುಳ್ಳ ಕಮಾನು ಮುರಿದು ಬಿದ್ದು ವರ್ಷಗಳೇ ಕಳೆದರೂ ದುರಸ್ತಿಗೆ ಅಧಿಕಾರಿಗಳು ಇನ್ನೂ ಮುಂದಾಗುತ್ತಿಲ್ಲ. ಕಾಮಾನ್ ಸಂಪೂರ್ಣ ಶಿತಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಆಹ್ವಾನಿಸುವಂತಿದ್ದೆ.
ಕಲಬುರಗಿ ನಗರದ ಹೊರವಲಯದಲ್ಲಿರುವ ಶರಣಸಿರಸಗಿ ಬಳಿ ಅಳವಡಿಸಲಾದ ಬೃಹತ್ ಕಮಾನು ಶಿಥಿಲಗೊಂಡು ವರ್ಷಗಳೇ ಕಳೆದರೂ ದುರಸ್ತಿಗೆ ಸಂಭಂದಿಸಿದ ಅಧಿಕಾರಿಗಳು ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ದಿನಾಲು ಸಾವಿರಾರು ವಾಹನಗಳು ಓಡಾಡುತ್ತವೆ. ಕಾಮಾನಿಗೆ ಹೊಂದಿಕೊಂಡೆ ಪೆಟ್ರೋಲ್ ಬಂಕ್, ಗ್ಯಾರೇಜು, ಹೋಟೆಲ್ಗಳಿದ್ದು, ಯಾವಾಗ ಮುರಿದು ಬಿಳೋತ್ತದೊ ಎಂಬ ಭಯದಲ್ಲೆ ಜನ ಓಡಾಡುವಂತಾಗಿದೆ.
ಬೇರೆ ಜಿಲ್ಲೆಗಳ, ನಗರಗಳ ಮಾರ್ಗದ ಮಾಹಿತಿ ನೀಡುವ ಕಮಾನಿನ ಬೋರ್ಡ್ ಕಿತ್ತುಗೋಗಿದೆ. ಬೋಲ್ಟಗಳು ಕೂಡ ಕಳಚಿ ಬಿದ್ದಿವೆ. ಸಂಪೂರ್ಣ ಶಿಥಿಲಗೊಂಡು ಬಾಗಿ ನಿಂತರು ಅಧಿಕಾರಿಗಳು ತೆಲೆ ಕಡೆಸಿಕೊಳ್ಳುತ್ತಿಲ್ಲ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ, ಸ್ಥಳೀಯರು, ವಾಹನ ಸವಾರರು ಭಯದಲ್ಲೆ ಓಡಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಾನ ಕಿತ್ತುಹೋಗಿ ವರ್ಷಗಳೆ ಕಳೆದಿವೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಸಂಭಂಧಿಸಿದ ಅಧಿಕಾರಿಗಳಾಗಲಿ ಸರಿಪಡಿಸಲು ಮುಂದಾಗದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಅಪಾಯಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ಅನಾಹುತ ಸಂಭಂವಿಸುವ ಮೊದಲೇ ಅಧಿಕಾರಿಗಳು ಹೆಚ್ಚೆತ್ತು ಕಮಾನು ದುರಸ್ತಿ ಮಾಡಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಇನ್ನಾದರು ಸಂಭಂದಿಸಿದ ಅಧಿಕಾರಿಗಳ ಗಮನಹರಿಸಿ ಕಮಾನು ದುರಸ್ತಿಗೊಳಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂಬುವುದು ಇಲ್ಲಿನ ವಾಹನ ಸವಾರ, ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.