ನೂತನ ಸಂಸದರಿಗೆ ಪಟ್ಟಣದಲ್ಲಿ ಸನ್ಮಾನ ಸಮಾರಂಭ

ನೂತನ ಸಂಸದರಿಗೆ ಪಟ್ಟಣದಲ್ಲಿ ಸನ್ಮಾನ ಸಮಾರಂಭ

ನೂತನ ಸಂಸದರಿಗೆ ಪಟ್ಟಣದಲ್ಲಿ ಸನ್ಮಾನ ಸಮಾರಂಭ
ಹುಮನಾಬಾದ : ಪಟ್ಟಣದ ವೀರಭದ್ರೇಶ್ವರ ಮಂದಿರ ಹತ್ತಿರವಿರುವ ಬಸವರಾಜ ಪಾಟೀಲ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹುಮನಾಬಾದ ವತಿಯಿಂದ ನೂತನವಾಗಿ ಸಂಸದರಾಗಿ ಆಯ್ಕೆಯಾಗಿರುವ ಸಾಗರ ಖಂಡ್ರೆ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ರುವ ಡಾ.ಚಂದ್ರಶೇಖರ ಬಿ ಪಾಟೀಲ್ ಮತ್ತು ಕರ್ನಾಟಕ ಸರ್ಕಾರದಿಂದ ಬೀದರ್‌ ನಗರಾಭಿವೃದ್ದಿ ಪ್ರಾಧಿಕಾಕ್ಕೆ ನಾಮನಿರ್ದೇಶನಗೊಂಡಿರುವ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧಕ್ಷ್ಯ ಅಮೃತರಾವ ಚಿಮ್ಮಕೂಡೆ ರವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಕಾರ್ಯಕ್ರಮ‌ದಲ್ಲಿ ನೂತನ ಸಂಸದ ಸಾಗರ್‌ ಖಂಡ್ರೆ,ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಡಾ,ಚಂದ್ರಶೇಖರ್‌ ಪಾಟೀಲ್‌ ,ಡಿಸಿಸಿ ಬ್ಯಾಂಕ್‌ ಉಪಾ‍ಧ್ಯಕ್ಷರಾದ ಅಭಿಷೇಕ ಪಾಟೀಲ್‌ ಅವರಿಗೆ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಖಂಡ್ರೆ ,ಮಾಜಿ ಸಚಿವ ರಾಜಶೇಖರ್‌ ಪಾಟೀಲ್‌ ,ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ,ಕಾಂಗ್ರೆಸ್‌ ಮುಖಂಡರಾದ ರೇವಣಸಿದ್ದಪ್ಪ ಪಾಟೀಲ್‌ ,ಲಕ್ಷ್ಮಣ್‌ ಬುಳ್ಳಾ ,ಸೇರಿದಂತೆ ಹಲವರು ಉಪಸ್ಥಿತರಿದ್ದರು

Share this post

Post Comment