ಆಯುಕ್ತರ ನೇಮಕಾತಿ ಮಾಹಿತಿ ಸಿಎಂ ಸಿದ್ಧರಾಮಯ್ಯಗೆ ತಲೆನೋವು

ಆಯುಕ್ತರ ನೇಮಕಾತಿ ಮಾಹಿತಿ ಸಿಎಂ ಸಿದ್ಧರಾಮಯ್ಯಗೆ ತಲೆನೋವು

ಆಯುಕ್ತರ ನೇಮಕಾತಿ ಮಾಹಿತಿ ಸಿಎಂ ಸಿದ್ಧರಾಮಯ್ಯಗೆ ತಲೆನೋವು

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ : ಸಿ ಎಂ ಸಿದ್ಧರಾಮಯ್ಯ ಅವರಿಗೆ ಇದೀಗ ರಾಜ್ಯ ಮಾಹಿತಿ ಹಕ್ಕು ಆಯುಕ್ತರ ನೇಮಕಾತಿ ವಿಷಯ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಮುಖ್ಯ ಮಾಹಿತಿ ಹಕ್ಕು ಅಯುಕ್ತರು ಸೇರಿದಂತೆ ಹತ್ತು ಮಂದಿ ಮಾಹಿತಿ ಆಯುಕ್ತರ ಹುದ್ದೆಗಳಿದ್ದು,ಈ ಪೈಕಿ ಎಂಟು ಹುದ್ದೆಗಳು ಖಾಲಿಯಾಗಿವೆ.

ಈ ಹುದ್ದೆಗಳನ್ನು ಭರ್ತಿ ಮಾಡಲು ತಯಾರಿ ನಡೆಸಿದ ರಾಜ್ಯ ಸರ್ಕಾರ,ಈ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿತ್ತು.
ಹೀಗೆ ಸರ್ಕಾರ ಅರ್ಜಿ ಆಹ್ವಾನಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳು,ಪತ್ರಕರ್ತರು ಸೇರಿದಂತೆ ಐನೂರಕ್ಕೂ ಹೆಚ್ಚು ಮಂದಿ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ಅರ್ಜಿ ಹಾಕ್ಕಿದ್ದಾರೆ.

ಮೂಲಗಳ ಪ್ರಕಾರ, ಇಂತಹ ಅರ್ಜಿಗಳನ್ನು ಪರಿಶೀಲಿಸಿ ಮಾಹಿತಿ ಹಕ್ಕು ಆಯಕ್ತರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಹಲವು ದಿನಗಳ ಹಿಂದೆಯೇ ಪೂರ್ಣವಾಗಬೇಕಿತ್ತು. ಇಂತಹ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಈ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಸಂಬಂಧ ಪಟ್ಟ ಕಡತವನ್ನು ಪರಿಶೀಲಿಸಬೇಕಿತ್ತು. ಆದರೆ ಇದೀಗ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ಪ್ರಭಾವ ಬೀರುತ್ತಿರುವವರನ್ನು ನೋಡಿ ಮುಖ್ಯಮಂತ್ರಿಗಳಿಗೆ ತಲೆನೋವು ಪ್ರಾರಂಭವಾಗಿದೆ.‌

 

Share this post

Post Comment