ರಾಜ್ಯಪಾಲರು ಕೇಂದ್ರ ಸರಕಾರ ಕೈಗೊಂಬೆಯಾಗಿದ್ದಾರೆ : ದಿನೇಶ್‌ ಗುಂಡೂರಾವ್‌

ರಾಜ್ಯಪಾಲರು ಕೇಂದ್ರ ಸರಕಾರ ಕೈಗೊಂಬೆಯಾಗಿದ್ದಾರೆ : ದಿನೇಶ್‌ ಗುಂಡೂರಾವ್‌

ರಾಜ್ಯಪಾಲರು ಕೇಂದ್ರ ಸರಕಾರ ಕೈಗೊಂಬೆಯಾಗಿದ್ದಾರೆ : ದಿನೇಶ್‌ ಗುಂಡೂರಾವ್‌

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗ ತನಿಖೆಗೆ ರಾಜ್ಯಪಾಲರು ರಾಜಕೀಯ ಒತ್ತಡದಿಂದ ಅನುಮತಿ ಕೋಟಿದ್ದಾರೆ. ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಅವರು ಯಾವುದೇ ರೀತಿಯಿಂದಲೂ ಅಧಿಕಾರ ದುರಪಯೋಗ ಮಾಡಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ, ಜೊಲ್ಲೆ ಹಾಗೂ ನಿರಾಣಿ ವಿರುದ್ಧ ಯಾವುದೇ ಕ್ರಮವನ್ನು ರಾಜ್ಯಪಾಲರು ತೆಗೆದುಕೊಳ್ಳುತ್ತಿಲ್ಲ. ಏಕಾಏಕಿ ಮುಖ್ಯಮಂತ್ರಿ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರು ಪಕ್ಷಾಪಾತ ಮಾಡುತ್ತಿದ್ದಾರೆ ಎಂದು ಇದರಿಂದ ತಿಳಿಯುತ್ತದೆ ಎಂದು ಗುಂಡೂರಾವ್‌ ಹೇಳಿದರು.

ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ. ರಾಜ್ಯಪಾಲರು ತನಿಖೆಗೆ ಆದೇಶ ನೀಡಿದ್ದಾರೆ. ಆ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ರಾಜ್ಯಪಾಲರು ತನಿಖೆಗೆ ಒಪ್ಪಿಗೆ ನೀಡಿರುವುದು ಸರಿನೋ ತಪ್ಪೋ ಅನ್ನುವ ವಿಷಯದ ಕುರಿತು ವಿಚಾರಣೆ ನಡೆಯುತ್ತಿದೆ ಅಷ್ಟೆ ಎಂದು ಹೇಳಿದರು.

ನಂತರ ಆಸ್ಪತ್ರೆಗಳಲ್ಲಿ ತಜ್ಷ ವೈದ್ಯರ ಕೊರತೆ ಹಾಗೂ ವೈದ್ಯಕೀಯ ಸಾಮಗ್ರಿ ಕುರಿತು ಮಾತನಾಡಿದ ಸಚಿವರು, ಸಾಮಗ್ರಿ ಇಲ್ಲ ಎನ್ನುವುದು ಸುಳ್ಳು. ಸಾಮಗ್ರಿ ಇಲ್ಲದೆ ಯಾವುದೇ ಆಸ್ಪತ್ರೆ ನಡೆಯುವುದಿಲ್ಲ. ಸದ್ಯ ಎಲ್ಲ ಆಸ್ಪತ್ರೆಗಳ ಸ್ಥಿತಿ ಸರಿಯೇ ಇದೆ. ಆದರೆ ವೈದ್ಯರ ಕೊರೆತೆ ಇದೆ. ನೇಮಕಾತಿ ಮಾಡಲಾಗುತ್ತಿದೆ. ನಮ್ಮ ವೇತನಕ್ಕೆ ಸರಿ ಹೊಂದುವ ವೈದ್ಯರು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

Share this post

Post Comment