ಮುಖ್ಯಮಂತ್ರಿ ಆಗಕ್ಕೆ ಜೂನಿಯರ್ – ಸೀನಿಯರ್ ಎಂಬ ಪ್ರಶ್ನೆಯೇ ಇಲ್ಲ: ಶಾಮನೂರು
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ರಾಜ್ಯದಲ್ಲಿ ಸಿದ್ದರಾಮಯ್ಯನವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಬಂದರೆ ನಾನೇ ಆ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಾತನಾಡಿದ ಅವರು, ರಾಜಕೀಯದಲ್ಲಿ ಜೂನಿಯರ್ – ಸೀನಿಯರ್ ಎಂಬ ಪ್ರಶ್ನೆಯೇ ಇಲ್ಲ.. ಶಾಸಕರು ಯಾರಿಗೆ ಬಹುಮತ ಕೊಡ್ತಾರೋ ಅವರಿಗೆ ಹೈಕಮಾಂಡ್ ಒಪ್ಪೋದು, ನಂಗೂ ಸಿಎಂ ಆಗಬೇಕು ಅನ್ನೋ ಆಸೆ ಇದೆ ಎಂದು ಹೇಳಿದರು.
ಒಂದು ವೇಳೆ ಸಿಎಂ ಬದಲಾವಣೆ ವಿಚಾರ ಬಂದರೆ ನಾನೇ ಮೊದಲು ಸ್ಪರ್ಧೆ ಮಾಡುತ್ತೇನೆ.. ಈಗ ಸಿದ್ದರಾಮಯ್ಯನವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಹೈಕಮಾಂಡ್ ಆಶೀರ್ವಾದ ಇರುವವರೆಗೆ ಅವರೇ ಆಡಳಿತ ನಡೆಸಲಿ ಎಂದು ಶಾಮನೂರು ಹೇಳಿದರು.