ಕೋರ್ಟ್​​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲು

ಕೋರ್ಟ್​​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲು

ಕೋರ್ಟ್​​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲು

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ : ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಕುರಿತಾದ ವಿಚಾರಣೆ ಹೈಕೋರ್ಟ್ ನಲ್ಲಿ ಮುಕ್ತಾಯವಾಗಿದ್ದು, ಕೋರ್ಟ್​​​​ ತೀರ್ಪನ್ನು ಕಾಯ್ದಿರಿಸಿದ್ದರಿಂದ ಸದ್ಯ ಸಿದ್ದರಾಮಯ್ಯ ವಿಚಷಾರದಲ್ಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆಂದು ವರದಿ ತಿಳಿದು ಬಂದಿದೆ.

ಬಿಬಿಎಂಪಿಗೆ ಉದ್ದೇಶಪೂರ್ವಕವಾಗಿ 68 ಕೋಟಿ ರೂಪಾಯಿಗೂ ಅಧಿಕ ಮೊತ್ತ ವಂಚಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದ್ದು, ತನಿಖೆಗೆ ರಮೇಶ್​​​​ ದೂರಿನ ಮೂಲಕ ಮನವಿ ಮಾಡಿದ್ದಾರೆ.

2013-2018ರ ಸಿದ್ಧರಾಮಯ್ಯನವರ ಆಡಳಿತದ ಅವಧಿಯಲ್ಲಿ ಸರ್ಕಾರದ ಸಾಧನೆಗಳ ಪ್ರಚಾರಕ್ಕಾಗಿ ಬಿ ಬಿ ಎಮ್‌ ಪಿ ವ್ಯಾಪ್ತಿಯ ಪಾಲಿಕೆ ಒಡೆತನದ 493 ಬಸ್ ತಂಗುದಾಣಗಳನ್ನು ಉಪಯೋಗಿಸಲಾಗಿತ್ತು. ಆದರೆ ಬಳಸಿಕೊಂಡಿದ್ದಕ್ಕೆ ಬಿಬಿಎಂಪಿಗೆ ಕಾನೂನು ಪ್ರಕಾರ ರಾಜ್ಯ ಸರ್ಕಾರ 68,14,90,236 ರೂಪಾಯಿ ಪಾವತಿಸದೇ ವಂಚಿಸಿದೆ ಎಂದು ರಮೇಶ್​​​​ ದೂರಿನಲ್ಲಿ ಉಲ್ಲೇಖಿಸಿದ್ದಾರೆಂದು  ಮಾಹಿತಿ ತಿಳಿದು ಬಂದಿದೆ.

Share this post

Post Comment