ಹೆತ್ತವರನ್ನು ಪೂಜಿಸಿದಾಗ ದೇವರ ಸಾಕ್ಷಾತ್ಕಾರ ಸಾಧ್ಯ

ಹೆತ್ತವರನ್ನು ಪೂಜಿಸಿದಾಗ ದೇವರ ಸಾಕ್ಷಾತ್ಕಾರ ಸಾಧ್ಯ

ಔರಾದ : ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು. ಹೆತ್ತವರನ್ನು ಪೂಜಿಸಿದಾಗ ಮಾತ್ರ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಹೇಳಿದರು. ಪಟ್ಟಣದ ಗಾಂಧಿ ಚೌಕ ಕಾಲೋನಿಯ ಶಾಂತಿ-ಕ್ರಾಂತಿ ಗಣೇಶ ಮಂಡಳಿಯಿಂದ ಶನಿವಾರ ರಾತ್ರಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ,ಸಾಧಕರಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ತಂದೆ-ತಾಯಿ ಅವರನ್ನು ಪೂಜಿಸಿ ಯೋಗಕ್ಷೇಮವು ನೋಡಿಕೊಳ್ಳುವುದರೊಂದಿಗೆ ಅನ್ನ ನೀಡಿ ಸೇವೆ ಮಾಡಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು.

ನಾನಾ ಕ್ಷೇತ್ರದಲ್ಲಿ ಮಾದರಿ ಸೇವೆ ಮಾಡಿದ ಸಾಧಕರನ್ನು ಗುರುತಿಸಿ ಗಣೇಶ ಹಬ್ಬವನ್ನು ಯುವಕರು ವಿನೂತನವಾಗಿ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಗಣೇಶನ ಇತಿಹಾಸವನ್ನು ಎಲ್ಲರೂ ತಿಳಿಯಬೇಕು.ಅಲ್ಲದೇ ಈ ಹಬ್ಬವನ್ನು ಎಲ್ಲರೂ ಸೇವೆ ಒಗ್ಗಟ್ಟಾಗಿ ಆಚರಿಸುವ ಹಬ್ಬವಾಗಿದೆ ಎಂದರು.

ಪ್ರಮುಖರಾದ ಶಿವಾಜಿರಾವ ಪಾಟೀಲ್ ಮುಂಗನಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂದೀಪ ಮೀಸೆ, ಬಾಬುರಾವ ಉಪ್ಪೆ, ಅನಿಲ ಹೇಡೆ, ಗಣೇಶ ಮಂಡಳಿಯ ಅಧ್ಯಕ್ಷ ಸಚೀನ ಫುಲಾರಿ, ಪೊಲೀಸ್ ಪೇದೆ ಹರೀಶ್, ಶಿವು ನಿರ್ಮಳೆ, ಶ್ರೀಕಾಂತ ಫುಲಾರಿ, ವಿನಯ ಫುಲಾರಿ, ಆಕಾಶ ಫುಲಾರಿ, ರತಿಕಾಂತ ನಿರ್ಮಳೆ, ವಿವೇಕ ನಿರ್ಮಳೆ ಸೇರಿದಂತೆ ಅನೇಕರಿದ್ದರು.

ಶರಣಪ್ಪ ಪಾಟೀಲ್ ಸ್ವಾಗತಿಸಿದರು. ರತ್ನದೀಪ ಕಸ್ತೂರೆ ನಿರೂಪಿಸಿದರು. ಶ್ರೀಕಾಂತ ನಿರ್ಮಳೆ ವಂದಿಸಿದರು.

ಸಾಧಕರಿಗೆ ಸತ್ಕಾರ

ಈ ವೇಳೆ ನಾನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸತ್ಕರಿಸಲಾಯಿತು.ಶಿವಾನಂದ ಮೊಕ್ತೆದಾರ್ (ಮಾದ್ಯಮ), ಶಕುಂತಲಾ (ವೈದ್ಯಕೀಯ), ರಜೀಯಾ ಬೀ (ಆಶಾ ಕಾರ್ಯಕರ್ತೆ), ಸುನಿಲ ಮೀತ್ರಾ (ಸಮಾಜಿಕ ಸೇವೆ), ಚಂದ್ರಕಾAತ ಫುಲಾರಿ (ಪೌರಕಾರ್ಮಿಕ) ಇವರನ್ನು ಸತ್ಕರಿಸಲಾಯಿತು.

Share this post

Post Comment