ಊತ್ತರ ಕರ್ನಾಟಕ ನ್ಯೂಸ್ ಡೆಸ್ಕ್ : ಸಿಂಧನೂರು ನಗರದ ತಹಸೀಲ್ ಕಚೇರಿಯಲ್ಲಿ ಸಿಂಧನೂರು ತಹಸೀಲ್ದಾರ್ ಅರುಣ್ ಎಚ್ ದೇಸಾಯಿ ಅವರು ಕಲ್ಯಾಣ ಕರ್ನಾಟಕ ಉತ್ಸವ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಶಾಸಕ ಹಂಪನಗೌಡ ಮಾತನಾಡಿ ನಮ್ಮ ಭಾಗ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ ಎಂದು ಅರಿತುಕೊಂಡು ಇಂದಿನ ಸರಕಾರಗಳು ನಂಜುಂಡಪ್ಪ ವರದಿಯನ್ನು ಜಾರಿಗೆ ತಂದರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷವಾಗಿ ಅನುದಾನವನ್ನು ತಂದಿದೆ ಎಂದರು.
ಈ ಸಂದರ್ಭದಲ್ಲಿ ಪೌರಯುಕ್ತ ಮಂಜುನಾಥ್ ಗುಂಡೂರ ಸೇರಿದಂತೆ ಅನೇಕರಿದ್ದರು.