ಊತ್ತರ ಕರ್ನಾಟಕ ನ್ಯೂಸ್ ಡೆಸ್ಕ್
ಬೀದರ್: ಭಾರತೀಯ ವಾಯುಪಡೆ ಬೀದರ್ ವತಿಯಿಂದ ಬೀದರ್ ಕೋಟೆಯ ಮೇಲೆ ಏರ್ ಶೋ ಕಾರ್ಯಕ್ರಮವನ್ನು ಸೇ.೨೧ ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.21ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಈ ಏರ್ ಶೋ ಕಾರ್ಯಕ್ರಮ ಬೀದರ್ ನಗರದ ಎಲ್ಲಾ ಶಾಲಾ- ಕಾಲೇಜುಗಳ ವಿಧ್ಯಾರ್ಥಿಗಳು ಹಾಗೂ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ಅಂದು ಮಧ್ಯಾಹ್ನ 3 ಗಂಟೆಗಳ ಒಳಗೆ ಬೀದರ್ ಕೋಟೆಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಹಾಜರಿದ್ದು ಈ ಏರ್ ಶೋ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದು ಹೇಳಿದರು.