ಸಿಎಂ ಹೆಸರಲ್ಲಿ “ಆಪತ್ಕಾಲಯಾನ” ನೂತನ ಯೋಜನೆ ಜಾರಿ

ಸಿಎಂ ಹೆಸರಲ್ಲಿ “ಆಪತ್ಕಾಲಯಾನ” ನೂತನ ಯೋಜನೆ ಜಾರಿ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್: ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ ಗಂಟೆ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಅಂಬ್ಯುಲೆನ್ಸ್ ಗಳ ಸೇವೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.‌

ಸಾರಿಗೆ ಇಲಾಖೆ ಸಹಕಾರದೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರೋಡ್ ಸುರಕ್ಷತೆ ನಿಧಿಯಡಿ ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ 65 ಅಂಬ್ಯುಲೆನ್ಸ್ ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿಕೊಟ್ಟಿದ್ದಾರೆ.

ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಅಂಬ್ಯುಲೆನ್ಸ್ ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ತಂತ್ರಜ್ಞಾನವನ್ನ ಅಳವಡಿಸಲಾಗಿದೆ. 39 ಬಿಎಲ್‌ ಎಸ್‌ ಅಂಬ್ಯುಲೆನ್ಸ್ ಗಳಿವೆ. ರಸ್ತೆ ಸಂಚಾರದಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಬ್ಲಾಕ್ ಸ್ಪಾಟ್ ಗಳನ್ನ ಗುರುತಿಸಿದ್ದು, ಅಂಥಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಅಂಬ್ಯುಲೆನ್ಸ್ ಗಳನ್ನು ನೀಡಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ‌  ಅವರು ಮಾತನಾಡಿ ಯೋಜನೆಗೆ ರಸ್ತೆ ಸುರಕ್ಷತಾ ನಿಧಿಯಡಿ ನೆರವು ಒದಗಿಸಿರುವ ಇನ್ನೂ ಹೆಚ್ಚಿನ ಅಂಬ್ಯುಲೆನ್ಸ್ ಗಳನ್ನ ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಇದೇ ವೇಳೆ ಘೋಷಿಸಿದರು. ರಸ್ತೆ ಸಂಚಾರದ ಅಪಘಾತಗಳಲ್ಲಿ ಗಾಯಾಳುಗಳು ಹಾಗೂ ಸಾವು ನೋವುಗಳನ್ನ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆಯಾಗಿದೆ. ಅಪಘಾತ ಪ್ರಕರಣಗಳಿಗಾಗಿಯೇ ಪ್ರತ್ಯೇಕ ಅಂಬ್ಯುಲೆನ್ಸ್ ಗಳನ್ನ ಆರೋಗ್ಯ ಇಲಾಖೆ ಒದಗಿಸಿರುವುದು ಅತ್ಯಂತ ಉತ್ತಮ ನಿರ್ಧಾರವಾಗಿದ್ದು, ರಾಜ್ಯದಾದ್ಯಂತ ಯೋಜನೆ ವಿಸ್ತರಿಸಲು ಸಾರಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

Share this post

Post Comment