ಅಕ್ಟೋಬರ್‌ 7 ರಿಂದ ಬೀದರನಲ್ಲಿ ದಸರಾ ದರ್ಬಾರ

ಅಕ್ಟೋಬರ್‌ 7 ರಿಂದ ಬೀದರನಲ್ಲಿ ದಸರಾ ದರ್ಬಾರ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್: ಸಾರೆಗಮಪ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ ವತಿಯಿಂದ ಬೀದರ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಲಾಯಿತು.

ಪಂ.ಶ್ರೀ. ಪುಟ್ಟರಾಜ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸಾರೆಗಮಪ ಮಹೇಶಕುಮಾರ ಕುಂಬಾರ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ನಾಡಿನ ಪ್ರಸಿದ್ಧ ಕಲಾವಿದರ ತಂಡವಾದ ಸಾರೆಗಮಪ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ ವತಿಯಿಂದ ಜಿಲ್ಲೆಯಾದ್ಯಾಂತ ದಸರಾ ದರ್ಬಾರ ಎನ್ನುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನ 5 ದಿನಗಳ ಕಾಲ ಹಮ್ಮಿಕೊಂಡಿದ್ದು, 7ನೇ ತಾರೀಕು ಚಿದ್ರಿಯಲ್ಲಿ ಪ್ರಾರಂಭವಾಗಿ 11ನೇ ತಾರೀಕು ಬಾಲ್ಕಿಯಲ್ಲಿ ಕೊನೆಯಾಗುತ್ತದೆ ಬೀದರ್ ಜಿಲ್ಲೆಯ ಎಲ್ಲ ಜನರು ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಡೆಯುವ ನೃತ್ಯೋತ್ಸವದ ನಿರ್ದೇಶಕರಾಗಿರುವ ಅಕ್ಷಯ್ ಕುಮಾರ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಂಗೀತದೊಂದಿಗೆ ನೃತ್ಯೋತ್ಸವ ಕೂಡಾ ಇರಲಿದೆ. ಗಣೇಶನ ಹಾಡು, ಕಾಳಿಕಾ ಅವತಾರ, ಶಿವತಾಂಡವ ಮತ್ತು ರಾಮಾಯಣದ ಕಥೆಗಳನ್ನು ನೃತ್ಯದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜಕುಮಾರ್ ಹೆಬ್ಬಾಳೆ, ಶ್ರೀಕಾಂತ್ ಸ್ವಾಮಿ, ಜೆಸ್ಸಿ ಸೋನ್ವಾನೆ, ಗೋರಖನಾಥ್ ಕುಂಬಾರ್ ಉಪಸ್ಥಿತರಿದ್ದರು.

Share this post

Post Comment