ಅನಾಥಾಶ್ರಮ ವಿದ್ಯಾರ್ಥಿಗಳಿಗೆ ವಸ್ತುಗಳು ವಿತರಣೆ

ಅನಾಥಾಶ್ರಮ ವಿದ್ಯಾರ್ಥಿಗಳಿಗೆ ವಸ್ತುಗಳು ವಿತರಣೆ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್:   ಹುಮನಾಬಾದ: ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್‌ಸ್ಟಾರ್ ವತಿಯಿಂದ ಬರಿದಾಬಾದ್ ವೆಲ್ಮೇಗ್ನಾ ಗುಡ್‌ನ್ಯೂಸ್ ಸೊಸೈಟಿ ಅನಾಥಾಶ್ರಮಕ್ಕೆ ಕೆಲವು ಅಗತ್ಯ ವಸ್ತುಗಳನ್ನು ವಿತರಿಸಲಾಗಿತ್ತು.
ಹುಮ್ನಾಬಾದ್ ತಾಲೂಕಿನ ಬರಿದಾಬಾದ್ ಗ್ರಾಮದಲ್ಲಿ ಇರುವ ಅನಾಥಾಶ್ರಮದಲ್ಲಿ 7 ವರ್ಷ ಯಿಂದ 20 ವರ್ಷ ಒಳಗಿರುವ 50 ಮಕ್ಕಳಿಗೆ
ಕಬ್ಬಿಣದ ಬೀರುಗಳು ಮತ್ತು ಬ್ಲಾಂಕೆಟ್ಗಳು ಕೊಡುಗೆಯಾಗಿ ನೀಡಿದರು.
ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಪುನಿತ್ ಸಿಂಗ್ ಅವರು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.

ಸುಮೀತ್ ಗೋಯಲ್ ಅವರು ಮಕ್ಕಳಿಗೆ ಬಟ್ಟೆಗಳನ್ನು ನೀಡಿದರು.
ಪ್ರಸನ್ನ ಸಿಂದೋಲ್ ಅವರು ಮಕ್ಕಳಿಗಾಗಿ ಚಾಕೊಲೇಟ್‌ಗಳು ಸಿಹಿ ತಿನುಸು ಮತ್ತು ಬೋರ್ಡ್ ಆಟಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಬದಲ್ಲಿ ಕಿರಣ್ ಸ್ಯಾಮ್ಯುಯೆಲ್, ಮಹೇಶ ಚಿಮ್ಕೋಡ್,
ಗುರು ಸಿಂದೋಲ್, ಮನೋಜ್ ರಬಗಾರ್, ಆನಂದ್ ಕೋಟರ್ಕಿ, ಡಾ.ಸಂಗಮೇಶ ವಡ್ಗಾವೆ, ಸಹನಾ ಪಾಟೀಲ್, ಪೂಜಾ ಜಾರ್ಜ್ ಸ್ಯಾಮ್ಯುಯೆಲ್, ಗುರುರಾಜ ಮೈಲಾಪುರ, ಭವೇಶ್ ಪಟೇಲ್, ಮಂಜುನಾಥ ಕುಭಾ, ಆನಂದ್ ಕುಲಕರ್ಣಿ, ಅಮಯ್ ಸಿಂದೋಲ್, ಸ್ಫೂರ್ತಿ ಧನೂರ್ ಹಾಗೂ ವೈಭವ್ ಭಾದಭಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this post

Post Comment