ಬೀದರ್ ವಿವಿಗೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ ಮನವಿ

ಬೀದರ್  ವಿವಿಗೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ  ಮನವಿ

ದಲಿತ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಬೀದರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಬೀದರ್ ವಿಶ್ವವಿದ್ಯಾಲಯಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಸಂದೀಪ್ ಕಾಂಟೆ, ಜಗತ್ತಿನಲ್ಲಿಯೇ ಹೆಚ್ಚಿನ ವಿದ್ಯಾರ್ಹತೆ ಪಡೆದ ಬಾಬಾ ಸಾಹೇಬರ ಹೆಸರನ್ನು ಬೀದರ್ ವಿಶ್ವವಿದ್ಯಾಲಯಕ್ಕೆ ಇಡಬೇಕು ಇಲ್ಲದಿದ್ದರೆ ನೌಬಾದ್ ನಿಂದ ಹಾಲಹಳ್ಳಿಯಲ್ಲಿರುವ ಬೀದರ್ ವಿಶ್ವವಿದ್ಯಾಲಯದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು ಮತ್ತು ಅಂಬೇಡ್ಕರ್ ಅವರು ಶಾಲೆಗೆ ಹೋದ ಪ್ರಥಮ ದಿನವಾದ ನವೆಂಬರ್ 7ರಂದು ವಿದ್ಯಾರ್ಥಿ ದಿನವೆಂದು ಘೋಷಿಸಬೇಕು ಎಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿದರು.

Share this post

Post Comment