ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ತನ್ನ ಭೇಟಿಗೆ ಹಂಬಲಿಸುತ್ತಿರುವ ಸ್ಯಾಂಡಲ್ ವುಡ್ ನಟ, ನಟಿಯರಿಗೆ ದರ್ಶನ್ ಬೇಡ ಎಂದಿದ್ದಾರೆ. ಯಾರೂ ಬಳ್ಳಾರಿ ಜೈಲಿಗೆ ಬರುವುದು ಬೇಡ, ಸದ್ಯಕ್ಕೆ ನನಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶ ರವಾನೆ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಬಂದು ಎರಡು ತಿಂಗಳಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಚಾರ್ಜ್‌ಶೀಟ್, ಜಾಮೀನು ಟೆನ್ಶನ್ ಜೊತೆಗೆ ಜೊತೆಗೆ ಬೆನ್ನು ನೋವಿನಿಂದ ಹೈರಾಣಾಗಿದ್ದಾರೆ. ಎರಡು ತಿಂಗಳಲ್ಲಿ ಪತ್ನಿ, ತಾಯಿ, ಸಹೋದರ, ಸಹೋದರಿ, ಸಂಬಂಧಿಗಳಾದ ಸುಶಾಂತ್, ಹೇಮಂತ್, ಚಂದ್ರ ಭೇಟಿ ಮಾಡಿದ್ದಾರೆ. ಅಲ್ಲದೇ ನಟ ಧನ್ವಿರ್, ನಿರ್ದೇಶಕ ಪ್ರಕಾಶ್, ಹರಿಕೃಷ್ಣ, ಶೈಲಜಾ ನಾಗ್ ಸೇರಿ ಒಂದಷ್ಟು ಸ್ನೇಹಿತರು ಬಂದು ಹೋಗಿದ್ದಾರೆ.
ಈಗ ದರ್ಶನ್ ಅವರನ್ನು ನೋಡಲು ಹಲವು ನಟ ನಟಿಯರು ಬಳ್ಳಾರಿ ಜೈಲಿಗೆ ಬರಲು ಮುಂದಾಗಿದ್ದು ಪತ್ನಿ ವಿಜಯಲಕ್ಷ್ಮಿ ಬಳಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಲು ನಟ, ನಟಿಯರು ಅವಕಾಶವನ್ನು ಕೇಳುತ್ತಿದ್ದಾರೆ. ಈ ವಿಚಾರವನ್ನು ದರ್ಶನ್‌ಗೆ ವಿಜಯಲಕ್ಷ್ಮಿ ತಿಳಿಸಿದಾಗ, ಸದ್ಯಕ್ಕೆ ಯಾರು ಬರುವುದು ಬೇಡ. ಸ್ವಲ್ಪ ದಿನದಲ್ಲೇ ಜಾಮೀನು ಸಿಗಬಹುದು. ಆಗ ನಾನೇ ಬೆಂಗಳೂರಿಗೆ ಬರುತ್ತೇನೆ ಅಲ್ಲಿಯೇ ಭೇಟಿಯಾಗೋಣ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.