ಕಲಬುರಗಿಯಲ್ಲಿ ಮತ್ತೊಂದು ಅತಿದೊಡ್ಡ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರೊಬ್ಬರಿಗೆ ಬ್ಲಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ನಲಪಾಡ್ ಬ್ರಿಗೇಡ್‌ನ ಕಲಬುರಗಿ ಅಧ್ಯಕ್ಷೆ 32 ವರ್ಷದ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ 39 ವರ್ಷದ ಶಿವರಾಜ್ ಪಾಟೀಲ ಬಂಧಿತ ಆರೋಪಿಗಳು. ಈ ಇಬ್ಬರನ್ನು ಕಾರ್ಯಾಚರಣೆ ನಡೆಸುವ ಮೂಲಕ ಸಿಸಿಬಿ ಪೋಲಿಸರು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದು, ನ್ಯಾಯಲಯವು 8 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಇನ್ನು ಬಂಧಿತ ಆರೋಪಿ ಮಂಜುಳಾ ಬಳಿ ಆರು ಸ್ಮಾಟ್೯ ಪೋನ್ ಪತ್ತೆಯಾಗಿದ್ದು, ಮೊಬೈಲ್ ನಲ್ಲಿ ಇನ್ನಷ್ಟು ಅಧಿಕಾರಿಗಳ ವಿಡಿಯೋ ಪತ್ತೆಯಾಗಿವೆ ಎದು ತಿಳಿದುಬಂದಿದೆ.
ಇನ್ನು ಕಲಬುರಗಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿರುವ ಇತ್ತೀಚಿಗಷ್ಟೆ ನಡೆದ ಗ್ಯಾಂಗ್ ಒಂದು ಯುವತಿರನ್ನು ಬಳಸಿಕೊಂಡು ಅಧಿಕಾರಿಗಳಿಗೆ ಹಾಗೂ ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತಿದೊಡ್ಡ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿರುವುದು ಗಮನಿಸಿದ್ರೆ.. ಕಲಬುರಗಿ ಕ್ರೈಸಿಟಿ ಆಗ್ತಿಯಾ ಬದಲಾಗುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ.