ಸದಾ ಕಾಡುವ ಸಿನಿಮಾಗಳಲ್ಲಿ ಅಪ್ಪು ಅಮರ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದಿವೆ. ಆದರೆ, ಪುನೀತ್ ರಾಜ್‌ಕುಮಾರ್ ಅಮರವಾಗಿಯೇ ಇದ್ದಾರೆ. ಅಭಿಮಾನಿಗಳ ಮನದಲ್ಲಿ ಖಾಯಂ ಜಾಗ ಮಾಡಿಕೊಂಡಿದ್ದಾರೆ. ಸಿನಿಮಾಗಳ ಮೂಲಕ ಈಗಲೂ ಮನರಂಜಿಸುತ್ತಲೇ ಇದ್ದಾರೆ.
ಪುನೀತ್ ಅಭಿನಯದ ಸಿನಿಮಾಗಳಲ್ಲಿ ಬೆಟ್ಟದ ಹೂವು ಅದ್ಭುತವಾಗಿಯೇ ಇದೆ.
ಇದಕ್ಕೇ ಅಲ್ವೇ? ಅಪ್ಪು ಬಾಲ್ಯದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದುಕೊಂಡಿರೋದು? ಈ ಸಿನಿಮಾ ಮಕ್ಕಳ ಮನಸ್ಸಿನಲ್ಲಿ ಈಗಲೂ ಹೊಸದೊಂದು ಉತ್ಸಾಹ ಮೂಡಿಸುತ್ತದೆ. ಅಪ್ಪು ದಿ ಬೆಸ್ಟ್ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ.
ಅಪ್ಪು ಮೊದಲ ಸಿನಿಮಾ ಅನ್ನೋದು ಗೊತ್ತೇ ಇದೆ. ಆದರೆ, ಅಭಿ ಇನ್ನೂ ಒಂದು ಲೆವಲ್‌ನ ಚಿತ್ರವೇ ಆಗಿತ್ತು. ಹುಬ್ಬಳ್ಳಿಯಲ್ಲಿ ನಡೆದ ರಿಯಲ್ ಕಥೆಯನ್ನೆ ಈ ಚಿತ್ರ ಆಧರಿಸಿತ್ತು. ಈ ಮೂಲಕ ಅಪ್ಪು ಎಲ್ಲರ ಹೃದಯ ಕದ್ದಿದ್ದರು. ರಿಯಲ್ ಕಥೆಗೆ ಮತ್ತೆ ಜೀವ ತುಂಬಿದ್ದರು.
ಅರಸು ಚಿತ್ರ ನಿಜಕ್ಕೂ ಸ್ಪೆಷಲ್ ಚಿತ್ರವೇ ಆಗಿದೆ. ಡೈರೆಕ್ಟರ್ ಮಹೇಶ್ ಬಾಬು ಈ ಚಿತ್ರದಲ್ಲಿ ಒಳ್ಳೆ ಕಥೆ ಮಾಡಿದ್ದರು. ಶ್ರೀಮಂತನೊಬ್ಬ ಸಾಮಾನ್ಯ ವ್ಯಕ್ತಿಯಂತೆ ಜೀವಿಸೋದೇ ಈ ಚಿತ್ರದ ಕಥೆ ಆಗಿತ್ತು. ಇದನ್ನ ಅಪ್ಪು ತುಂಬಾನೆ ಚೆನ್ನಾಗಿಯೇ ನಿರ್ವಹಿಸಿದ್ದರು. ಇದು ಕೂಡ ಜನರ ಮೆಚ್ಚಿಗೆಯನ್ನ ಪಡೆದುಕೊಂಡಿತ್ತು.
ಅಪ್ಪು ಅಭಿನಯದ ಪೃಥ್ವಿ, ವಂಶಿ, ಜಾಕಿ ಚಿತ್ರಗಳೂ ಕೂಡ ಒಳ್ಳೆ ಸಿನಿಮಾಗಳೇ ಆಗಿದ್ದವು. ಈ ಸಿನಿಮಾಗಳನ್ನ ಕೂಡ ಜನ ಮೆಚ್ಚಿಕೊಂಡರು. ಹಾಗೆ ಅಪ್ಪು ದಿ ಬೆಸ್ಟ್ ಸಿನಿಮಾಗಳ ಪಟ್ಟಿ ಮಾಡಿದ್ರೆ, ಈ ಎಲ್ಲ ಚಿತ್ರಗಳು ಇದ್ದೇ ಇರುತ್ತವೆ.
ಅಪ್ಪು ನಟನೆಯ ಚಿತ್ರಗಳಲ್ಲಿ ಒಂದು ಮೌಲ್ಯ ಇರ್ತಾ ಇತ್ತು. ರಾಜಕುಮಾರ ಚಿತ್ರ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಹೇಳಬಹುದು. ಕಾರಣ, ಈ ಚಿತ್ರದಲ್ಲಿ ಸಾಕಷ್ಟು ವಿಷಯ ಇತ್ತು. ಸ್ಪೂರ್ತಿದಾಯ ಮ್ಯಾಟರ್ ಕೂಡ ಇತ್ತು ಅಂತಲೇ ಹೇಳಬಹುದು.