ನ್ಯೂಸ್ ಡೆಸ್ಕ್ ಬೀದರ್ :- 2024-25ನೇ ಸಾಲಿನ ಹಿಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂಕೋಸು ಮತ್ತು ಹಸಿ ಮೆಣಸಿನಕಾಯಿ (ನೀ) ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಅವಕಾಶ ಇರುತ್ತದೆ.
ವಿಮಾ ನೊಂದಣಿಗೆ ನವೆಂಬರ್.15 ಕೊನೆಯ ದಿನಾಂಕವಾಗಿರುತ್ತದೆ. ಬೆಳೆ ಸಾಲ ಪಡೆಯದ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆ ನೋಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂ ಘೋಷಿತ ದೃಢೀಕರಣ ಪತ್ರ ಒಳಗೊಂಡಂತೆ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸುವುದು.
ಹವಾಮಾನ ಅಂಶಗಳಾದ ಮಳೆ ಪ್ರಮಾಣ, ಗಾಳಿಯ ವೇಗ, ಆರ್ಧ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ವಿಮೆ ನಷ್ಟವನ್ನು ತಿರ್ಮಾನಿಸಲಾಗುತ್ತದೆ.
KSHMA ವಿಮಾ ಕಂಪನಿ ಆಯ್ಕೆಯಾಗಿದ್ದು, ಬೆಳೆಗಳ ಹೆಸರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ: ಹೂಕೋಸು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 62,000 ರೂ. ಪ್ರತಿ ಹೆಕ್ಟೇರಿಗೆ ರೈತರು ಪಾವತಿಸಬೇಕಾದ ಕಂತಿನ ದರ ಶೇಕಡಾ (5%) 3,100 ರೂ. ಹಾಗೂ ಹಸಿ ಮೆಣಸಿನಕಾಯಿ (ನೀ) ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 71,000 ರೂ. ಪ್ರತಿ ಹೆಕ್ಟೇರಿಗೆ ರೈತರು ಪಾವತಿಸಬೇಕಾದ ಕಂತಿನ ದರ ಶೇಕಡಾ (5%) 3,550 ರೂ.. ಇದಕ್ಕೆ ದಿನಾಂಕ: 15-11-2024 ಕೊನೆಯ ದಿನಾಂಕವಾಗಿರುತ್ತದೆ.
ಪ್ರಸ್ತುತ ಸಾಲಿನಲ್ಲಿ ಯೋಜನೆವಾರು ಮತ್ತು ಬೆಳೆವಾರು ವಿವರಗಳನ್ನು ಆನ್‌ಲೈನ್ ಪೋರ್ಟಲ್ www.samrakshane.karnataka.gov.in ಮೂಲಕ ನೊಂದಾಯಿಸಲು ಎಲ್ಲಾ ಬ್ಯಾಂಕ್‌ನ ಶಾಖೆಗಳಲ್ಲಿ ಸದರಿ ಸೌಲಭ್ಯಗಳ ಒದಗಿಸಲಾಗಿದ್ದು, ತಮ್ಮ ಹತ್ತಿರದ ಬ್ಯಾಂಕ ಶಾಖೆಗಳಲ್ಲಿ ರೈತರು ವಿಮೆ ಮಾಡಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಹಾಗೂ ಗ್ರಾಮ ಪಂಚಾಯತಗೆ ಅನುಮೋದನೆಯಾದ ಬೆಳೆಗಳ ಬಗ್ಗೆ ತಿಳಿಯಲು ತಮಗೆ ಸಂಬಂಧಿಸಿದ ತಾಲ್ಲೂಕಿನ ತೋಟಗಾರಿಕೆ ಕಛೇರಿಗಳಿಗೆ/ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೀದರ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.