ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ನೀಡೋದು ಸರ್ವೇ ಸಾಮಾನ್ಯ. ಆದರೆ ಈ ದೇವಸ್ಥಾನದಲ್ಲಿ ನ್ಯೂಡಲ್ಸ್ನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ.
ಕೋಲ್ಕತ್ತಾದ ಕಾಳಿ ದೇಗುಲದಲ್ಲಿ ನ್ಯೂಡಲ್ಸ್ನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.
ಕೋಲ್ಕತ್ತಾದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಇದರ ನಡುವೆ ಈ ದೇವಸ್ಥಾನವು ತನ್ನ ವಿಶಿಷ್ಟ ರೀತಿಯ ಪ್ರಸಾದ ವಿತರಣೆ ಮೂಲಕವೇ ಸುದ್ದಿ ಮಾಡುತ್ತಿದೆ. ಚೀನಾ ಟೌನ್ ಎಂದೇ ಪ್ರಸಿದ್ಧಿ ಪಡೆದಿರುವ ಟಾಂಗ್ರಾ ಏರಿಯಾದಲ್ಲಿ ಈ ಚೈನೀಸ್ ಕಾಳಿ ದೇಗುಲವಿದೆ. ಇಲ್ಲಿ ವಿಚಿತ್ರ ಅಂದರೆ ನ್ಯೂಡಲ್ಸ್, ಚಾಪ್ ಸ್ಯೂ, ಅನ್ನ ಹಾಗೂ ತರಕಾರಿಯ ಖಾದ್ಯಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ಬಂಗಾಳಿಗಳು ಕೂಡ ಈ ದೇಗುಲಕ್ಕೆ ಆಗಮಿಸ್ತಾರೆ ಹಾಗೂ ಕೈಯಲ್ಲೇ ಮಾಡಿದ ಕಾಗದವನ್ನು ಸುಡುವ ಮೂಲಕ ದುಷ್ಟ ಶಕ್ತಿಯನ್ನು ದೂರ ಇಡಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಚೈನೀಸ್ ಇನ್ಸೆನ್ಸ್ ಸ್ಟಿಕ್ಗಳ ಮೂಲಕ ಮೇಣದಬತ್ತಿಯನ್ನು ಉರಿಸಲಾಗುತ್ತದೆ. ಅಲ್ಲದೇ ಈ ದೇಗುಲದ ಸುವಾಸನೆ ಕೂಡ ಇತರೆ ಹಿಂದೂ ದೇಗುಲಗಳ ಸುಗಂಧಕ್ಕಿಂತ ವಿಭಿನ್ನವಾಗಿದೆ.