‘ಪುಷ್ಪ 2’ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ದಕ್ಷಿಣ ಭಾರತ, ಉತ್ತರ ಭಾರತ ದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.
ಈ ಕಾರಣದಿಂದಿಂದ ಈಶಾನ್ಯ ಭಾರತದಲ್ಲೇ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ದೊಡ್ಡದಾಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಪ್ಲ್ಯಾನ್ ನಡೆದಿದೆ.
ಇತ್ತೀಚೆಗೆ ಚಿತ್ರತಂಡ ಹಿನ್ನೆಲೆ ಸಂಗೀತ ನಿರ್ದೇಶಕರನ್ನು ಬದಲಿಸಿತ್ತು. ದೇವಿಶ್ರೀ ಪ್ರಸಾದ್ ಬದಲು ಥಮನ್ ಅವರು ತಂಡ ಸೇರಿಕೊಂಡಿದ್ದರು. ಹೀಗಾಗಿ, ಸಿನಿಮಾ ಕೆಲಸಗಳು ಪೂರ್ಣಗೊಂಡಿಲ್ಲವೇ ಎನ್ನುವ ಆತಂಕ ಮೂಡಿತ್ತು. ಆದರೆ, ಆ ಬಗ್ಗೆ ವರಿ ಮಾಡುವ ಆಲೋಚನೆ ಇಲ್ಲ ಎನ್ನಲಾಗಿದೆ.
ನವೆಂಬರ್ 17ರಂದು ‘ಪುಷ್ಪ 2’ ಟ್ರೇಲರ್ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಈ ಸಂದರ್ಭದಲ್ಲಿ ತಂಡ ಬಿಹಾರದಲ್ಲಿ ಇರಲಿದೆ. ಬಿಹಾರದ ಪಾಟ್ನಾದಲ್ಲಿ ತಂಡ ಪ್ರಚಾರ ಮಾಡಲಿದೆ. ಈ ಕಾರಣಕ್ಕೆ ಅಲ್ಲಿಯೇ ಟ್ರೇಲರ್ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಬಂದಿದೆ. ಇದರಿಂದ ಈಶಾನ್ಯ ಭಾರತದಲ್ಲಿಯೂ ಸಿನಿಮಾಗೆ ಮತ್ತಷ್ಟು ಹೈಪ್ ಸಿಕ್ಕಂತೆ ಆಗಲಿದೆ ಎಂಬುದು ತಂಡದ ಆಲೋಚನೆ.
ಶೀಘ್ರವೇ ತಂಡ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ‘ಪುಷ್ಪ 2’ ತಂಡ ಸಂಪೂರ್ಣವಾಗಿ ವಿವಿಧ ಪ್ಲ್ಯಾನಿಂಗ್ ಮಾಡಿಕೊಂಡಿದೆ. ಸಿನಿಮಾ ರಿಲೀಸ್ವರೆಗೂ ವಿವಿಧ ನಗರಗಳಿಗೆ ತೆರಳಿ ತಂಡದವರು ಪ್ರಚಾರ ಮಾಡಲಿದ್ದಾರೆ.