ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಹನುಮಂತನ ಹವಾ ನಡೀತಿದ್ರೆ, ಈಗ ಹನುಮಂತನ ಹುಡುಗಿ ಹವಾ ಸ್ಟಾರ್ಟ್ ಆಗಿದೆ. ವೀಕೆಂಡ್ ಏಪಿಸೋಡ್ನಲ್ಲಿ ಕಿಚ್ಚ ಸುದೀಪ್ ಹನುಮಂತನ ಹುಡುಗಿ ಹೇಗಿರ್ತಾಳೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ. ಖುದ್ದು ಹನುಮಂತ ಹಾಡು ಹಾಡಿ ತನ್ನ ಹುಡುಗಿ ವರ್ಣನೆ ಮಾಡಿದ್ದಾನೆ.
ಸದ್ಯ ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಹವಾ ಮಾಡಿರೋ ಸ್ಪರ್ಧಿ ಅಂದ್ರೆ ಅದು ಕುರಿಗಾಹಿ ಕಂ ಸಿಂಗರ್ ಹನುಮಂತ. ಈ ಬಾರಿಯ ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹನುಮಂತ, ಆರಂಭದಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಅನ್ನಿಸಿದ್ರೂ ಕ್ರಮೇಣ ತನ್ನದೇ ಆಟ ಶುರುಮಾಡಿದ್ದಾನೆ. ಕಳೆದ ವಾರ ಕ್ಯಾಪ್ಟನ್ ಆಗಿದ್ದ ಹನುಮಂತ ಮನೆಯಲ್ಲಿ ತನ್ನದೇ ಹವಾ ಮೆಂಟೈನ್ ಮಾಡಿದ್ದ. ಮತ್ತೀಗ ಹನುಮಂತನ ಹುಡುಗಿ ಹವಾ ಸ್ಟಾರ್ಟ್ ಆಗಿದೆ.
ಕಳೆದ ವಾರ ಗೌತಮಿ ಹನುಮಂತನ ಬಳಿ ಬಂದು, ಆತನಿಗೆ ಗರ್ಲ್ ಫ್ರೆಂಡ್ ಇದ್ದಾಳಾ ಇಲ್ವಾ ಅನ್ನೋ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದ ಹನುಮ ಹುಡುಗಿ ಇದ್ದಾಳೆ, ಬಿಗ್ ಬಾಸ್‌ನಿಂದ ಹೋಗ್ತಾನೆ ಮದುವೆ ಆಗ್ತಿನಿ ಅನ್ನೋ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ. ಈ ವಾರದ ವೀಕೆಂಡ್ ಏಪಿಸೋಡ್ಗೆ ಬಂದಿದ್ದ ಕಿಚ್ಚ ಸುದೀಪ್ ಹನುಮಂತನ ಹುಡುಗಿಯ ಟಾಪಿಕ್ ತೆಗೆದುಕೊಂಡು ಕಾಲೆಳೆಯೋಕೆ ಶುರುಮಾಡಿದ್ದರು. ಗೋಲ್ಡ್ ಸುರೇಶ್‌ಗೆ ಹನುಮಂತನ ಹುಡುಗಿ ಚಿತ್ರ ಬಿಡಿಸೋ ಟಾಸ್ಕ್ ಕೊಟ್ರು. ಅದ್ರೆ ಸುರೇಶ್ ಬಿಡಿಸಿದ ಚಿತ್ರ ಹನುಮಂತನಿಗೆ ಪಸಂದ್ ಬರ್ಲಿಲ್ಲ. ಬಳಿಕ ಗೌತಮಿಗೆ ಈ ಟಾಸ್ಕ್ ಕೊಡಲಾಯ್ತು. ಹನುಮಂತ ವರ್ಣಿಸಿದಂತೆ ಗೌತಮಿ ಮುದ್ದಾಗಿ ಚಿತ್ರಬಿಡಿಸಿದರು. ಈ ಚಿತ್ರ ನೋಡಿ, ಬಹುತೇಕ ತನ್ನ ಹುಡುಗಿ ಹಿಂಗೇ ಇದ್ದಾಳೆ ಅಂತ ಹನುಮಂತ ಖುಷ್ ಆದ. ಜೊತೆಗೆ ಸುದೀಪ್ ಕೋರಿಕೆ ಮೇರೆಗೆ ತನ್ನ ಹುಡುಗಿಯನ್ನ ವರ್ಣಿಸೋ ಹಾಡನ್ನೂ ಹಾಡಿ ಎಲ್ಲರನ್ನೂ ರಂಜಿಸಿದ.
ಹನುಮಂತಣ್ಣ ಈ ಸಾರಿಯ ಬಿಗ್ ಬಾಸ್ ಸೀಸನ್ನ ಫೆವರೀಟ್ ಕಂಟೆಂಸ್ಟೆಂಟ್ ಅಂದ್ರೆ ತಪ್ಪಾಗಲ್ಲ. ತನ್ನ ಮುಗ್ದತೆಯಿಂದ, ತನ್ನ ಚಾಲಾಕಿತನದಿಂದ ಮತ್ತೀಗ ತನ್ನ ಲವ್ ಸ್ಟೋರಿಯಿಂದ ಹನುಮಂತ ಸುದ್ದಿಯಲ್ಲಿದ್ದಾನೆ. ಹನುಮಂತ ಆಡ್ತಿರೋ ಆಟ ನೋಡ್ತಿದ್ರೆ ಈ ಸಾರಿ ಈತನೇ ಕಪ್ ಗೆದ್ರೂ ಅಚ್ಚರಿಯಿಲ್ಲ.. ಬಿಗ್ ಬಾಸ್ ಕಿರೀಟ ಗೆದ್ದು ಗೆಳತಿ ಕೈ ಹಿಡಿಯೋ ತಯಾರಿಯಲ್ಲಿದ್ದಾನೆ ಕಿಲಾಡಿ ಹನುಮ.