ಡಿ.3 ರಂದು ಹುಮನಾಬಾದನಲ್ಲಿ ಬಹೃತ್‌ ಆರೋಗ್ಯ ತಪಾಸಣಾ ಶಿಬಿರ

ಡಿ.3 ರಂದು ಹುಮನಾಬಾದನಲ್ಲಿ ಬಹೃತ್‌ ಆರೋಗ್ಯ ತಪಾಸಣಾ ಶಿಬಿರ

ಹುಮನಾಬಾದ : ಜನಸೇವೆಯೇ ಜನಾರ್ಧನ ಸೇವೆ ಎಂದು ಬದುಕುತ್ತಿರುವ ದಿವಂಗತ ಬಸವರಾಜ ಪಾಟೀಲ್ ಅವರ ಸುಪುತ್ರರಿಂದ, ಹುನಮಾನಾಬಾದ್ ತಾಲೂಕು ಹಾಗೂ ಬೀದರ್ ಜಿಲ್ಲೆಯ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಹುಮನಾಬಾದನ ದಿವಂಗತ.ಬಸವರಾಜ ಪಾಟೀಲ ಫೌಂಡೇಶನ್, ಕಲಬುರ್ಗಿಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ, ಎನ್.ಜಿ. ಎನ್ ಫೌಂಡೇಶನ್ ಕಲಬುರ್ಗಿ ಹಾಗೂ ರೋಟರಿ ಕ್ಲಬ್ ಹುಮನಾಬಾದ್ ಎಲೈಟ್ ವತಿಯಿಂದ ಇದೇ ಡಿಸೆಂಬರ್ 3ರಂದು ಭವ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುವ ಈ ಶಿಬಿರವು ಹುಮನಾಬಾದನ ಕಲ್ಲೂರು ರಸ್ತೆಯ HKDETʼs ಡೆಂಟಲ್ ಮತ್ತು ಫಾರ್ಮಸೀ ಕಾಲೇಜಿನಲ್ಲಿ ನಡೆಯಲಿದೆ.

ವಿವಿಧ ವಿಭಾಗಗಳ ನುರಿತಿ ವೈದ್ಯರಿಂದ ತಪಾಸಣೆ
ವಿವಿಧ ವಿಭಾಗಗಳ ವೈದ್ಯಕೀಯ ತಜ್ಞರ ನೇತೃತ್ವದಲ್ಲಿ ಸಕ್ಕರೆ, ಬಿಪಿ, ಥೈರಾಯ್ಡ್, ಹೃದ್ರೋಗ, ಸಾಮಾನ್ಯ ವೈದ್ಯಕೀಯ, ಮಕ್ಕಳ ಆರೋಗ್ಯ, ಹೆರಿಗೆ ಹಾಗೂ ಮಹಿಳಾ ರೋಗ, ನರ ವಿಭಾಗ, ಕಣ್ಣಿನ ತಪಾಸಣೆ, ಕಿವಿ-ಮೂಗು-ಗಂಟಲು, ಚರ್ಮ ಮತ್ತು ಲೈಂಗಿಕ ರೋಗಗಳು, ಮನೋವೈದ್ಯಕೀಯ, ಶಸ್ತ್ರಚಿಕಿತ್ಸೆ, ಹೃದಯ ಹಾಗೂ ಯೂರಾಲೋಜಿ ಸೇರಿದಂತೆ ಅನೇಕ ವಿಭಾಗಗಳ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗಿದೆ.

 

ಶಿಬಿರದ ವಿವರಗಳು 

ದಿನಾಂಕ: ಇದೇ ಡಿಸೆಂಬರ್ 3 ರಂದು.

ಸಮಯ: ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ.

ಹುಮನಾಬಾದ ಮತಕ್ಷೇತ್ರದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಫೌಂಡೇಶನ್ ನ ಪ್ರಮುಖರಾದ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಮನವಿ ಮಾಡಿದ್ದಾರೆ.

ವರದಿ : ದೇವರಾಜ್‌ ವನಗೇರಿ

Share this post

Post Comment