ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಕೆಂಡಾಮಂಡಲ “2027ರಲ್ಲಿ ಸಮಾಜವಾದಿಗಳದ್ದೇ ಪಟ್ಟಾಭಿಷೇಕ!”

ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಕೆಂಡಾಮಂಡಲ “2027ರಲ್ಲಿ ಸಮಾಜವಾದಿಗಳದ್ದೇ ಪಟ್ಟಾಭಿಷೇಕ!”

ಲಕ್ನೋ: ಉತ್ತರ ಪ್ರದೇಶದ ರಾಜಕೀಯ ಅಖಾಡ ಈಗ ಕಾವೇರಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಬೆಂಬಲಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಬಗ್ಗೆ ಏನು ಹೇಳಿದ್ದಾರೋ ಅದು ಬಹಳ ಕಡಿಮೆ. ಬಂಗಾಳದಲ್ಲಿ ದೀದಿ ಒಬ್ಬರೇ ಹೋರಾಡಿದರೂ ಜಯಭೇರಿ ಬಾರಿಸುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಚುನಾವಣಾ ಆಯೋಗದ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಬಂಗಾಳದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಾಗ ಯಾವೊಬ್ಬ ಅಧಿಕಾರಿಯನ್ನೂ ಬದಲಿಸಲಿಲ್ಲ. ತಮ್ಮ ಸಂಬಂಧಿಕರನ್ನು ಗೆಲ್ಲಿಸಲು ಅನುಕೂಲವಾಗುವ ಅಧಿಕಾರಿಗಳನ್ನೇ ಇಲ್ಲಿ ನೇಮಿಸಲಾಗಿತ್ತು” ಎಂದು ಗಂಭೀರ ಆರೋಪ ಮಾಡಿದರು.

ಯುಪಿ ಸಚಿವ ಸಂಪುಟ ವಿಸ್ತರಣೆಯ ಕುರಿತು ವ್ಯಂಗ್ಯವಾಡಿದ ಅಖಿಲೇಶ್, “ಇದೆಲ್ಲಾ ಬಿಜೆಪಿಯ ಹಳೆಯ ನಾಟಕ. ಈಗ ಯಾರು ಪ್ರಮಾಣ ವಚನ ಸ್ವೀಕರಿಸಿದರೂ ನಮಗೆ ಅಡ್ಡಿಯಿಲ್ಲ. ಅಸಲಿ ಪ್ರಮಾಣ ವಚನ ನಡೆಯುವುದು 2027ರಲ್ಲಿ! ಆ ದಿನ ಸಮಾಜವಾದಿ ಪಕ್ಷ ಮತ್ತು PDA (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಮೈತ್ರಿಕೂಟ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲಿದೆ. ಅವರು ಸಂಪುಟ ವಿಸ್ತರಣೆಯನ್ನಾದರೂ ಮಾಡಿಕೊಳ್ಳಲಿ ಅಥವಾ ಸಂಕುಚಿತಗೊಳಿಸಲಿ, ಜನ ಈಗಾಗಲೇ ಬದಲಾವಣೆ ಬಯಸಿದ್ದಾರೆ” ಎಂದು ಗುಡುಗಿದರು.

ವಿಡಿಯೋ ಲಿಂಕ್‌ : https://x.com/ANI/status/2035247914281271377?s=20

 

Share this post

Post Comment