ಕಳೆದ 24 ನಾಲ್ಕು ಗಂಟೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏನಾಯಿತು.
1.ಭಾರತದ ಷೇರುಪೇಟೆಯಲ್ಲಿ ಐಪಿಒಗಳು ಭಾರೀ ಸದ್ದು ಮಾಡುತ್ತಿದ್ದು, ಡಿಇಇ ಡೆವಲಪ್ಮೆಂಟ್ ಎಂಜಿನಿಯರ್ಸ್ ಬಳಿಕ, ನಾಳೆ ಶುಕ್ರವಾರ
ಮತ್ತೊಂದು ಸ್ಟಾನಿ ಲೈಫಸ್ಟೆöÊಲ್ಸ್ ಲಿಮಿಟೆಡ ಐಪಿಒ ಮಾರುಕಟ್ಟೆಯಲ್ಲಿ ಅದೃಷ್ಟ
ಪರೀಕ್ಷೆಗಿಳಿಯಲು ಸಜ್ಜಾಗಿದೆ.
2.ಸಕುಮಾ ಎಕ್ಸ್ಪೋರ್ಟ್ಸ್ ಷೇರುಗಳು ಕಳೆದ 5 ದಿನಗಳಲ್ಲಿ ಹೂಡಿಕೆದಾರರಿಗೆ ಶೇ.೨೫ ಪ್ರತಿಶತದಷ್ಟು ಲಾಭವನ್ನು ನೀಡಿವೆ. ಕಳೆದ ಒಂದು
ತಿಂಗಳಲ್ಲಿ ಇದು ಶೇ.27 ರಷ್ಟು ಲಾಭ ನೀಡಿದೆ. ಇದಲ್ಲದೆ ಬೋನಸ್ ಷೇರುಗಳನ್ನು ಕೂಡ ಘೋಷಿಸಿದೆ.
3.ಚಿನ್ನದ ಬೆಲೆ ಕಳೆದ 5 ದಿನಗಳಿಂದ ಸತತ ಇಳಿಕೆ ಕಂಡಿತ್ತು. ಆದರೆ, ಇಂದು ಗುರುವಾರ (ಜೂನ್ ೨೦) ರಂದು ಗೋಲ್ಡ್ ರೇಟ್ ಸ್ಥಿರವಾಗಿದೆ.
ಕಳೆದ ತಿಂಗಳಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು, ನಂತರ ಸ್ವಲ್ಪ ಇಳಿಕೆ ದಾಖಲಿಸಿದೆ.
4.ಗುರುವಾರ ಭಾರತೀಯ ಷೇರುಮಾರುಕಟ್ಟೆಯ ಸೂಚ್ಯಕವಾದ ಸೆನ್ಸೆಕ್ಸ ಪ್ರಾರಂಭ 77,337 ಗೆ ಪ್ರಾರಂಭವಾಗಿದ್ದು 77,478 ಗೆ ಕೋನೆಗೊಂಡಿದೆ,
ನಿಫ್ಟಿಯು 23,516 ಪ್ರಾರಂಭವಾಗಿ 23,578 ಗೆ ಮುಕ್ತಾಯ ಗೊಂಡಿದೆ.
5.ಗೂಗಲ್ ಎಐ ಚಾಟ್ಬಾಟ್ ಜೆಮಿನಿ ಮೊಬೈಲ್ ಆಪ್ ಅನ್ನು ಭಾರತದಲ್ಲಿ ಬಿಡಗುಡೆ ಮಾಡಲಾಗಿದೆ. ಇಂಗ್ಲೀಷ್ ಮತ್ತು ಒಟ್ಟು 9 ಭಾರತದ ಸ್ಥಳೀಯ ಭಾಷೆಗಳಲ್ಲಿ ಈ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆಪ್ ಕುರಿತು ಸುಂದರ್ ಪಿಚೈ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊAಡಿದ್ದಾರೆ.