ರೇಣುಕಾಸ್ವಾಮಿ ಹತ್ಯೆ ಕೇಸು: ನಟ ದರ್ಶನ್ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಸಿವಿ ನಾಗೇಶ್

ರೇಣುಕಾಸ್ವಾಮಿ ಹತ್ಯೆ ಕೇಸು: ನಟ ದರ್ಶನ್ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಸಿವಿ ನಾಗೇಶ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಪರ ವಕೀಲರಾದ ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರು ಈಗಾಗಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಾದಿಸುತ್ತಿದ್ದು, ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಇನ್ನಷ್ಟು ಪ್ರಬಲವಾಗಿ ವಾದಿಸಲು ಅನುಭವಿ, ಹಿರಿಯ ವಕೀಲರನ್ನು ಅವರ ಪತ್ನಿ ವಿಜಯಲಕ್ಷ್ಮಿ ನೇಮಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ವಾರಗಳ ಹಿಂದಷ್ಟೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಹೆಚ್ ಡಿ ರೇವಣ್ಣ ಪರ ವಾದ ಮಂಡಿಸಿ ಅವರಿಗೆ ಜಾಮೀನು ಮಂಜೂರು ಮಾಡಲು ಕಾರಣರಾಗಿದ್ದ ಸಿವಿ ನಾಗೇಶ್ ಅವರು ಈಗ ದರ್ಶನ್ ಪರವಾಗಿ ವಾದ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರುಗಳು ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ತಂದೆ-ತಾಯಿಯ ಪರವಾಗಿ ದರ್ಶನ್ ಪರವಾಗಿ ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದರು. ಇದೀಗ ಸಿವಿ ನಾಗೇಶ್ ಅವರು ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರ ಬದಲಿಗೆ ವಾದ ಮಂಡಿಸುತ್ತಾರೆಯೇ ಅಥವಾ ಅನಿಲ್ ಬಾಬು, ರಂಗನಾಥ ರೆಡ್ಡಿ ಅವರುಗಳ ಜೊತೆಗೆ ಸಿವಿ ನಾಗೇಶ್ ಸಹ ವಾದ ಮಂಡಿಸುತ್ತಾರೆಯೇ ಕಾದು ನೋಡಬೇಕಿದೆ.
ಆರೋಪಿಯೊಬ್ಬನ ಪರವಾಗಿ ಇಬ್ಬರು ವಕೀಲರು ವಾದ ಮಂಡಿಸುವ ಅವಕಾಶ ಇದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ವಾದ ಮಂಡಿಸಿದರೆ, ದರ್ಶನ್ ಪರವಾಗಿ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share this post

Post Comment