ಕರ್ನಾಟಕ ರಾಜ್ಯದ ಸಹಕಾರಿ ಹಾಲು ಉತ್ಪಾದಕರ ಮಂಡಳಿ(ಕೆಎಂಫ್) ಹಾಲಿನ ಬೆಲೆ ಮತ್ತು ಗ್ರಾಹರಿಗೆ ಹೆಚ್ಚಿನ ಹಾಲನ್ನು ವಿತರಿಸುವುದಕ್ಕೆ ನಿರ್ಧರಿಸಿವೆ. ಇದು ಬುಧುವಾರ ಬೆಳೆಗೆಯಿಂದ ಜಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. 50 ಎಂ. ಎಲ್ ಹೆಚ್ಚುವರಿ ಹಾಲಿಗೆ 2 ರೂ, ಹೆಚ್ಚಿಗೆ ಪಾವತಿಸಬೇಕು ಎಂದಿದೆ.
ರಾಜ್ಯದಲ್ಲಿ ದಿನದ ಸರಾಸರಿ ಹಾಲು ಸಂಗ್ರಹಣೆ ಪ್ರಮಾಣವು ಕೋಟಿ ಲೀಟರ್ ಸನಿಹಕ್ಕೆ ಬಂದಿದೆ, ಸದ್ಯ ಪ್ರತಿನಿತ್ಯ ಸರಾಸರಿ 98.17 ಲಕ್ಷ ಲೀ ಹಾಲು ಸಂಗ್ರಹಣೆಯಾಗುತ್ತಿದು, ಕಳೆದ ಎರಡು ವರ್ಷಗಳಿಗೆ ಹೋಲಿಸದರೆ ಶೇ 15 ರಷ್ಟು ಹೆಚ್ಚಳವಾಗಿದೆ, ಈ ಹೆಚ್ಚಳವು ಕೆಎಂಫ್ ಗೆ ತೆಲೆನೊವು ಯಾಗಿದೆ.
ಹಾಲು ಉತ್ಪಾದನೆ ಸಂಗ್ರಹಣೆ ಕೇಂದ್ರಗಳಿಗೆ ಮತು ಜಿಲ್ಲಾ ಸಹಕಾರಿ ಒಕ್ಕೂಟಗಳಿಗೆ ನಷ್ಟದ ತೊಂದರೆ ಆಗುತ್ತಿದು, ಈ ಸಮಸ್ಯಯನ್ನು ಪರಿಹರಿಸಲು ಸಂಸ್ಥೆಯು ಹಾಲಿನ ಪ್ರಮಾಣ 50 ಎಂ ಎಲ್ ಹೆಚ್ಚಿಸಿ 2 ರೂ ಹೆಚಿಗೆ ತೆಗೆದುಕೊಳುತ್ತದ್ದಾರೆ.
ರೈತರು ಹಾಗೂ ಗ್ರಾಹಗರು ಒಕ್ಕೂಟದ ಎರಡು ಕಣ್ಣುಗಳಿದಂತೆ, ಈ ಇಬ್ಬರಿಗೂ ಸಮಸ್ಯೆಯಾಗದಂತೆ ಹಾಲಿನ ದರ ಪರಿಷ್ಕರಿಸಿ, ಗ್ರಾಹರಿಗೆ ಹೆಚ್ಚುವರಿ ಹಾಲು ನೀಡಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ, ಎಂದು ಕೆಎಂಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.