- ನಿವೃತ್ತ ಡಿ ಗ್ರೂಪ್ ನೌಕರನಿಗೆ ಅದ್ಧೂರಿ ಬೀಳ್ಕೊಡಗೆ ಸಮಾರಂಭ
- ತಾಪಂ ಸಿಪಾಯಿ ಓಂಕಾರ ಸೇವೆ ಮಾದರಿ : ಬಿರೇಂದ್ರ ಸಿಂಗ್ ಠಾಕೂರ್
- ಸಿಪಾಯಿಗೆ ಸನ್ಮಾನಗಳ ಸುರಿಮಳೆ
ಔರಾದ್ : ತಮ್ಮ 40 ವರ್ಷದ ಸಿಪಾಯಿ ಸೇವೆಯಲ್ಲಿ ಎಲ್ಲರೂ ಮೆಚ್ಚುವಂತೆ ಓಂಕಾರ ಪಾಂಚಾಳ ಸೇವೆ ಸಲ್ಲಿಸಿದ್ದಾರೆ ಎಂದು ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಈಚೇಗೆ ನಡೆದ ಸೇವಾ ನಿವೃತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಔರಾದ್ ತಾಲೂಕು ಪಂಚಾಯತನಲ್ಲಿ ಓಂಕಾರ ಪಾಂಚಾಳ ಕಳೆದ 12 ವರ್ಷದಿಂದ ಸೇವೆ ಸಲ್ಲಿದ್ದು, ಕಚೇರಿಯ ಎಲ್ಲ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಾಗಿದ್ದರು ಎಂದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಓಂಕಾರ ಪಾಂಚಾಳ ಅವರು ಎಲ್ಲರೊಂದಿಗೆ ಬೆರೆಯುವ ಸರಳ, ವ್ಯಕ್ತಿತ್ವ ಹೊಂದಿದ್ದರು. ಇವರಿಗೆ ಯಾವುದೇ ಕೆಲಸ ನೀಡಿದರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಕಾಯಕಯೋಗಿ ಎಂದು ಖ್ಯಾತಿ ಪಡೆದಿದ್ದರು. ಅವರ ನಿವೃತ್ತಿಯಿಂದ ಇಲಾಖೆ ಒಬ್ಬ ದಕ್ಷ ನೌಕರನಿಗೆ ಕಳೆದುಕೊಂಡಿದೆ ಎಂದರು. ತಮ್ಮ ಸೇವೆಯಲ್ಲಿ ಸಣ್ಣದೊಂದು ಕಪ್ಪು ಚುಕ್ಕೆಯಿಲ್ಲದೇ ಕಿರಿಯರಿಂದ ಉನ್ನತಮಟ್ಟದ ಅಧಿಕಾರಿಗಳ ಪ್ರೀತಿಗೆ ಪಾತ್ರವಾಗಿದ್ದರು ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಕಮಲನಗರ ತಾಪಂ ಇಒ ಮಾಣಿಕರಾವ ಪಾಟೀಲ್ ಓಂಕಾರ ಪಂಚಾಳ ಕಚೇರಿಯಲ್ಲಿ ಮಾದರಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಮಾದರಿ ಎಂದರು.ಸಹಾಯಕ ನಿರ್ದೇಶಕ ಹಣಮಂತರಾಯ್ ಕೌಟಗೆ, ಸುದೇಶ ಕೊಡ್ಡೆ, ಎಇಇ ವೆಂಕಟರಾವ ಶಿಂಧೆ ಮಾತನಾಡಿದರು.
ತಾಪಂ ವ್ಯವಸ್ಥಾಪಕ ಸಂಜುಕುಮಾರ ಗೊರನಾಳೆ, ಬಿಸಿಯೂಟ ಸಹಾಯಕ ನಿರ್ದೇಶಕ ಇನಾಯಲ್ ಅಲೀ ಸೌದಾಗರ್, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಪಾಟೀಲ್, ಪಿಡಿಒಗಳಾದ ನಾಗೇಶ ಮುಕ್ರಂಬೆ, ಶರಣಪ್ಪ ಗಾದಗೆ, ಶರಣಪ್ಪ ನಾಗಲಗಿದ್ದೆ, ನರಸಿಂಗ್ ಮಾನೆ, ಶ್ರೀಪತಿ, ಸಂಗೀತಾ, ವಿಜಯಲಕ್ಷ್ಮಿ, ಭರತ, ಸಂಗೀತಾ, ಆನಂದ, ಯಶ್ವಂತ, ಅಮರ ಬಿರಾದಾರ್, ಕಂಪ್ಯೂಟರ್ ಆಪರೇಟರ್ ಸಂಘದ ಅಧ್ಯಕ್ಷ ಸಂಜುಕುಮಾರ ಸೇರಿದಂತೆ ಅನೇಕರಿದ್ದರು.
ಸಿಪಾಯಿಗೆ ಸನ್ಮಾನಗಳ ಸುರಿಮಳೆ
ಸಿಪಾಯಿ ಓಂಕಾರ ಪಾಂಚಾಳ ಅವರಿಗೆ ತಾಪಂ ಕಚೇರಿಯಲ್ಲಿ ಸನ್ಮಾನಗಳ ಸುರಿಮಳೆ ಕಂಡು ಬಂತು. ಈ ವೇಳೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಅವರ ಒಡನಾಡಿಗಳಿಂದ ಸತ್ಕಾರ ನಡೆಯಿತು.
ವರದಿ:ಅಂಬಾದಾಸ ಉಪ್ಪಾರ ಔರಾದ