ಡೊನಾಲ್ಡ್‌ ಟ್ರಂಪ್‌ ಗೆಲುವಿನ ಬೆನ್ನಲ್ಲೇ ಎಲಾನ್‌ ಮಸ್ಕ್‌ಗೆ ಬಂಪರ್‌, ಟೆಸ್ಲಾ ಷೇರುಗಳು ಶೇ. 12ಕ್ಕಿತ ಹೆಚ್ಚು ಏರಿಕೆ!

ಡೊನಾಲ್ಡ್‌ ಟ್ರಂಪ್‌ ಗೆಲುವಿನ ಬೆನ್ನಲ್ಲೇ ಎಲಾನ್‌ ಮಸ್ಕ್‌ಗೆ ಬಂಪರ್‌, ಟೆಸ್ಲಾ ಷೇರುಗಳು ಶೇ. 12ಕ್ಕಿತ ಹೆಚ್ಚು  ಏರಿಕೆ!

ಜಾಗತಿಕವಾಗಿ ಬಹು ಚರ್ಚೆಗೆ ಗ್ರಾಸವಾಗಿದ ಅಮೇರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದ್ದು,ಟ್ರಂಪ್‌ ಭರ್ಜರಿ ಗೆಲ್ಲುವು ಸಾಧಿಸಿದ್ದಾರೆ .ಈ ಮೂಲಕ ಅವರ ಅಪ್ತ ವಲಯದಲ್ಲಿ ಗುರತಿಸಿಕೊಂಡ ಉದ್ಯಮಿ ಎಲಾನ್‌ ಮಸ್ಕ್‌ ಅವರ ಅಸ್ತಿ ಭರ್ಜರಿಯಾಗಿ ಏರಿಕೆ ಯಾಗಿದೆ ..

ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಷೇರುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಪ್ರಿ ಮಾರ್ಕೆಟ್‌ ಟ್ರೇಡಿಂಗ್‌ನಲ್ಲಿ ಟೆಸ್ಲಾ ಷೇರುಗಳು ಶೇ. 12ಕ್ಕಿತ ಹೆಚ್ಚು ಏರಿಕೆ ಕಂಡಿವೆ.

ಮಂಗಳವಾರದ ವಹಿವಾಟಿನಲ್ಲಿ ಟೆಸ್ಲಾ ಷೇರುಗಳು 8.60 ಡಾಲರ್‌ ಅಥವಾ ಶೇ. 3.54ರಷ್ಟು ಏರಿಕೆ ಕಂಡು 251.44 ಡಾಲರ್‌ನಲ್ಲಿ ವಹಿವಾಟು ಮುಗಿಸಿದ್ದವು. ಇದೀಗ ಪ್ರಿ ಮಾರ್ಕೆಟ್‌ನಲ್ಲಿ 31.17 ಡಾಲರ್‌ ಅಥವಾ ಶೇ. 12.40ರಷ್ಟು ಏರಿಕೆ ಕಂಡು 282.61ರಲ್ಲಿ ವಹಿವಾಟು ನಡೆಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟದ್ದಾರೆ .

ಒಂದೇ ದಿನದಲ್ಲಿ $21 ಬಿಲಿಯನ್ ಸಂಪಾದಿಸಿದ ಎಲಾನ್‌ ಮಸ್ಕ್‌

ಟೆಸ್ಲಾದಲ್ಲಿ ಅತಿ ಹೆಚ್ಚು ಪಾಲು ಹೊಂದಿರುವ ಉದ್ಯಮಿ  ಎಲಾನ್ ಮಸ್ಕ್‌, ಟೆಸ್ಲಾ ಷೇರು ಜಿಗಿತದಿಂದಾಗಿ ಆತನ ಸಂಪತ್ತು ಭಾರೀ ಪ್ರಮಾಣದಲ್ಲಿ ಏರಿಕೆಗೊಂಡಿದ್ದು, 21 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಈ ಮೂಲಕ ಮಸ್ಕ್‌ ಜಗತ್ತಿನ ಎರಡನೇ ಅತಿದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ ಎಂದು ವರದಿಯಾಗಿದೆ.

2021ರ ಇತ್ತೀಚಿಗೆ ಟೆಸ್ಲಾ ಷೇರು ಒಂದು ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಗಳಿಸಿದ್ದು ಇದೇ ಮೊದಲಾಗಿದ್ದು, ಟೆಸ್ಲಾ ಹೂಡಿಕೆದಾರರಿಗೆ ಬೆಸ್ಟ್ ದಿನವಾಗಿದೆ. ಗುರುವಾರ ಟೆಸ್ಲಾ ಮಾರುಕಟ್ಟೆ ಬಂಡವಾಳವು $117 ಬಿಲಿಯನ್ ಏರಿಕೆಗೊಂಡಿದೆ.

ಎಲೆಕ್ಟ್ರಿಕ್‌ ವಾಹನ ಉತ್ಪಾದಕ ಕಂಪನಿಯ ಸಿಇಒ ಎಲಾನ್‌ ಮಸ್ಕ್‌ ಚುನಾವಣೆಯಲ್ಲಿ ಬಹಿರಂಗವಾಗಿ ಡೊನಾಲ್ಡ್ ಟ್ರಂಪ್‌ ಅವರನ್ನು ಬೆಂಬಲಿಸಿದ್ದರು. ಹಾಗೂ ಅವರ ಪರವಾಗಿ ಹಲವು ಚುನಾವಣಾ ರ್ಯಾಲಿಯಲ್ಲಿ ಕೂಡ ಭಾಗವಹಿಸಿದ್ದರು

ಗೆಲುವು ಖಚಿತವಾಗುತ್ತಿದ್ದಂತೆ ಡೊನಾಲ್ಡ್‌ ಟ್ರಂಪ್‌ ಸರ್ಕಾರಿ ದಕ್ಷತೆಯ ಆಯೋಗವನ್ನು ಮುನ್ನಡೆಸಲು ಎಲಾನ್‌ ಮಸ್ಕ್ ಅವರನ್ನು ನೇಮಿಸುವ ಸುಳಿವು ನೀಡಿದ್ದಾರೆ.ಈ ಮೂಲಕ ಷೇರು ಪೇಟೆಯಲ್ಲಿ ಮಸ್ಕ್‌ ಒಡೆತನ ಹಲವು ಕಂಪನಿಗಳ ಷೇರುಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ .

ತಮ್ಮ ಗೆಲುವಿನ ನಂತರ ಫ್ಲೋರಿಡಾದಲ್ಲಿ ಭಾಷಣ ಮಾಡಿರುವ ಡೊನಾಲ್ಡ್‌ ಟ್ರಂಪ್‌, ಎಲಾನ್‌ ಮಸ್ಕ್‌ಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಪ್ರಚಾರದ ವೇಳೆ ಭಾರೀ ಬೆಂಬಲ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಲಯನೇರ್‌ ಉದ್ಯಮಿ ಓರ್ವ ಅದ್ಭುತ ವ್ಯಕ್ತಿ ಎಂದೂ ಅಮೆರಿಕದ ನಿಯೋಜಿತ ಅಧ್ಯಕ್ಷರು ಬಣ್ಣಿಸಿದ್ದಾರೆ.

Share this post

Post Comment