- ದೆಹಲಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅತಿಶಿ ಸಿಂಗ್!
- ಅರವಿಂದ ಕೇಜ್ರಿವಾಲ್ ರಾಜೀನಾಮೆಯ ಬೆನ್ನೆಲ್ಲೇ ಅತಿಶಿ ಸಿಂಗ್ ಅಯ್ಕೆ
- ಜಾಮೀನು ಪಡೆದು ಬಿಡುಗಡೆಯಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ
- ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಸಮರ್ಥವಾಗಿ ರಾಜ್ಯವನ್ನು ನೋಡಿದ್ರು ಅತಿಶಿ
- ಸಿಎಂ ಪರ ಹಲವು ಬಾರಿ ಮಾಧ್ಯಮಗಳೊಡನೆ ಬ್ಯಾಟಿಂಗ್ ಮಾಡಿದ್ರು
- ದೆಹಲಿ 3 ನೇಯ ಮಹಿಳೆ ಸಿಎಂ ಅಗಿ ಅತಿಶಿ ಸಿಂಗ್ ಅಯ್ಕೆ
ಸಿಎಂ ಅರವಿಂದ್ ಕೇಜ್ರಿವಾಲ ರಾಜೀನಾಮೆಯ ಬೆನ್ನೆಲ್ಲೇ ಅತಿಶಿ ಸಿಂಗ್ ಮರ್ಲೇನಾ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.ಮದ್ಯ ನೀತಿ ಹಗರಣದಲ್ಲಿ ಜೈಲು ಸೇರಿದ್ದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ಇಂದು ದೆಹಲಿಯ ಲೆ.ಗವರ್ನರ್ ಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮುಂದಿನ ಸಿಎಂ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು.
ಈಗ ಅತಿಶಿ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಸಮರ್ಥವಾಗಿ ರಾಜ್ಯವನ್ನು ನಿಭಾಯಿಸಿದ್ರುಸಿಎಂ ಪರ ಹಲವು ಬಾರಿ ಮಾಧ್ಯಮಗಳೊಡನೆ ಬ್ಯಾಟಿಂಗ್ ಮಾಡಿದ್ದಲ್ಲದೇ ಪಕ್ಷದ ಅಧಿಕೃತ ವಕ್ತಾರೆಯಂತೆ ಕಾರ್ಯನಿರ್ವಹಿಸಿದ್ದರು