ಚಳಕಾಪುರ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ವಿವಿಧ ದಲಿತ ಸಂಘಟನೆಗಳ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡ ಚಳಕಾಪುರ ಗ್ರಾಮಸ್ಥರು, ಸವರ್ಣೀಯರು ನಮ್ಮನ್ನು ಮನೆ ಹೊಕ್ಕು ಹೊಡೆದರು ಅದರ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ 24 ಗಂಟೆ ಆದ ನಂತರ fir ದಾಖಲು ಮಾಡಿದರು. ಸವರ್ಣೀಯರು ವಿನಾ ಕಾರಣ ನಮ್ಮ ಮೇಲೆ ದೂರು ನೀಡಲು ಹೋದಾಗ ಕೇವಲ ಅರ್ಧ ಗಂಟೆಯಲ್ಲಿ ಏಫ್ ಐ ಆರ್ ದಾಖಲಿಸಿದ್ದಾರೆ ಎಂದು ಹೇಳಿದರು.
ಮನವಿಯನ್ನು ಸ್ವೀಕರಿಸಿ ಉತ್ತರಕರ್ನಾಟಕ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಗ್ರಾಮಸ್ಥರು ಮನವಿಯನ್ನು ನೀಡಿ ತಮ್ಮ ತೊಂದರೆಯನ್ನ ತಿಳಿಸಿದ್ದಾರೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.