ಅಮ್‌ ಅದ್ಮಿ ಪಕ್ಷ ಸೇರಿದ ಅವಧ್‌ ಓಜಾ

ಅಮ್‌ ಅದ್ಮಿ ಪಕ್ಷ ಸೇರಿದ ಅವಧ್‌ ಓಜಾ
  • ಅಮ್‌ ಅದ್ಮಿ ಪಕ್ಷ ಸೇರಿದ ಅವಧ್‌ ಓಜಾ
  • ಸಿಸೋಡಿಯಾ ಮತ್ತು ಕೇಜ್ರಿವಾಲ್‌ ನೇತೃತ್ವದಲ್ಲಿ ಸೇರ್ಪಡೆ

 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿಧ್ಯಾರ್ಥಿಗಳಿಗೆ ಭೋದಿಸುವ ಅವಧ್‌ ಓಜಾ ಇಂದು ಅಮ್ ಅದ್ಮಿ ಪಕ್ಷವನ್ನು ಸೇರಿದ್ದಾರೆ.ಭೋದನೆಯ ಜೊತೆಗೆ ರಾಜಕೀಯದಲ್ಲಿ ಅಸಕ್ತಿಯನ್ನು ಹೊಂದಿರುವ ಓಜಾ ಅವರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಅಗುತ್ತಿರುತ್ತವೆ.

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತಾನಾಡಿದ ಅವರು “ರಾಜಕೀಯಕ್ಕೆ ಸೇರುವ ಮೂಲಕ ಶಿಕ್ಷಣಕ್ಕಾಗಿ ಕೆಲಸ ಮಾಡಲು ನನಗೆ ಅವಕಾಶ ನೀಡಿದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರಿಗೆ ಧನ್ಯವಾದಗಳು. ಶಿಕ್ಷಣವು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಆತ್ಮವಾಗಿದೆ. ಇಂದು, ನನ್ನ ರಾಜಕೀಯ ಇನ್ನಿಂಗ್ಸ್‌ನ ಆರಂಭದಲ್ಲಿ, ನಾನು ರಾಜಕೀಯ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಬೇಕಾದರೆ ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಸೇರುವ ಮೂಲಕ ಶಿಕ್ಷಣವನ್ನು ಆರಿಸಿಕೊಳ್ಳುತ್ತೇನೆ, ಶಿಕ್ಷಣದ ಅಭಿವೃದ್ಧಿ ನನ್ನ ಅತ್ಯುತ್ತಮ ಉದ್ದೇಶವಾಗಿದೆ ಎಂದ್ರು

 

Share this post

Post Comment