ಟೆಕ್ನೊಲೊಜಿ ಇಂದು ಬಹಳಷ್ಟು ಮುಂದುವರೆದಿದೆ. ಮೊಬೈಲ್ ನಿಂದ ಹಿಡಿದು ಕಂಪೂಟರ್, ಕೃಷಿ ತಂತ್ರಜ್ಞಾನ ದಿಂದ ವಾಹನಗಳವರೆಗೆ ದಿನಹೋದಂತೆ ಹೊಸ ಹೊಸ ಬದಲಾವಣೆಗಳು ಬರುತ್ತಲೇ ಇರುತ್ತವೆ. ಇದೀಗ ಟೆಕ್ ದೈತ್ಯ ಬಜಾಜ್ ಕಂಪನಿ ಬೈಕ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.
ಬಜಾಜ ಗ್ರೂಪ್ ಹಲವು ಕ್ಷೇತ್ರಗಳಲ್ಲಿ ಹೆಸರನ್ನು ಗಳಿಸಿದೆ, ಕ್ಷೇತ್ರಗಳಾದ ಹಣಕಾಸು, ಗ್ರಾಹಕ ಆರೈಕ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಇವಾಗ, ಬೈಕ ಮಾರುಕಟ್ಟೆಯಲ್ಲಿ ಹೋಸ ಹೆಜ್ಜೆಯನ್ನು ಇಟ್ಟಿದೆ. ಹೌದು, ಬಜಾಜ್ ಕಂಪನಿ ಇದೀಗ ವಿಶ್ವದ ಮೊದಲ ಸಿಎನ್ಜಿ ಬೈಕ್ ಅನ್ನು ಲಾಂಚ್ ಮಾಡಿದೆ. ಇನ್ನು ಈ ಸಿಎನ್ಜಿ ಬೈಕ್ ಗೆ ಬಜಾಜ್ ಫ್ರೀಡಂ 125 ಎಂಬ ಹೆಸರಿಡಲಾಗಿದೆ. ಪೆಟ್ರೋಲ್ ದರ ಹೆಚ್ಚಾಗುತ್ತಿದ್ದಂತೆ ಬಜಾಜ್ ಇದೀಗ ಸಿಎನ್ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ.
ಶುಕ್ರುವಾರ ಪುನೆಯಲ್ಲಿ ಅದ್ಧೂರಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಈ ಬಜಾಜ್ ಬೈಕ್ನಲ್ಲಿ ಸಿಎನ್ಜಿ ಹಾಗೂ ಪೆಟ್ರೋಲ್ ಎರಡೂ ಟ್ಯಾಂಕ್ ಅಳವಡಿಸಲಾಗಿದೆ. ಈ ಮೂಲಕ ಸಿಎನ್ಜಿ ಖಾಲಿಯಾದ ತಕ್ಷಣ ಪೆಟ್ರೋಲ್ ಬಳಸಿಕೊಂಡು ಬೈಕ್ ಓಡಿಸಬಹುದು.
ಈ ಫ್ರೀಡಂ 125 ಬೈಕ್ ಮೂರು ವೇರಿಯಂಟ್ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ ಫ್ರೀಡಂ ಡಿಸ್ಕ್ ಎಲ್ಇಡಿ, ಫ್ರೀಡಂ ಡ್ರಮ್ ಎಲ್ಇಡಿ ಮತ್ತು ಫ್ರೀಡಂ ಡ್ರಮ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂದು ಬಜಾಜ್ ಆಟೋ ಹೇಳಿದೆ. ಡ್ಯುಯಲ್ ಟೋನ್ ಬಣ್ಣದೊಂದಿಗೆ ಏಳು ಬಣ್ಣಗಳಲ್ಲಿ ಈ ಬೈಕ್ ಲಭ್ಯವಾಗಲಿದೆ ಎನ್ನಲಾಗಿದೆ. ಇದರಲ್ಲಿ ಕಂಪನಿಯು ಡಿಸ್ಕ್ ಎಲ್ಇಡಿ ರೂಪಾಂತರದ ಬೆಲೆಯನ್ನು ರೂ.1.10 ಲಕ್ಷ ಎಂದು ನಮೂದಿಸಿದೆ. ಡ್ರಮ್ ಎಲ್ಇಡಿಗೆ 1.05 ಲಕ್ಷ ಮತ್ತು ಡ್ರಮ್ ರೂಪಾಂತರಕ್ಕೆ ರೂ.95,000 ಎಂದು ಕಂಪನಿ ತಿಳಿಸಿದೆ.
ಈ ಬೈಕ್ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 125 ಸಿಸಿ ಎಂಜಿನ್ ಹೊಂದಿರುವ ಫ್ರೀಡಂ 125, 2 ಕೆಜಿ ಸಿಎನ್ಜಿ ಟ್ಯಾಂಕ್ ಮತ್ತು 2 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಸಿಎನ್ಜಿ 2 ಕೆಜಿಗೆ 200 ಕಿಮೀ ಮತ್ತು ಪೆಟ್ರೋಲ್ 2 ಲೀರ್ಗೆ 130 ಕಿಮೀ (ಲೀಟರ್ಗೆ 65 ಕಿಮೀ) ಮೈಲೇಜ್ ನೀಡುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ. ಈ ಎಂಜಿನ್ 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್ಜಿ ಯಲ್ಲಿ ಗರಿಷ್ಠ ವೇಗ ಗಂಟೆಗೆ 90.5 ಕಿಮೀ ಮತ್ತು ಪೆಟ್ರೋಲ್ನಲ್ಲಿ ಗರಿಷ್ಠ ವೇಗ ಗಂಟೆಗೆ 93.4 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ. ಸೀಟಿನ ಕೆಳಗೆ ಸಿಎನ್ಜಿ ಮತ್ತು ಪೆಟ್ರೋಲ್ ಟ್ಯಾಂಕ್ಗಳನ್ನು ಜೋಡಿಸಲಾಗಿದೆ.
ಅಪಘಾತಗಳಾದಾಗ ಸಿಎನ್ಜಿ ಸೋರಿಕೆಯನ್ನು ತಡೆಗಟ್ಟಲು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಸಾಮಾನ್ಯ ಪೆಟ್ರೋಲ್ ಬೈಕ್ ಗೆ ಹೋಲಿಸಿದರೆ ಈ ಬೈಕ್ 50 ಪ್ರತಿಶತದಷ್ಟು ವೆಚ್ಚ ಕಡಿಮೆ. ಈ ಮೂಲಕ ಕೇವಲ ಐದು ವರ್ಷಗಳಲ್ಲಿ ರೂ.75,000 ವರೆಗೆ ಉಳಿಸಬಹುದು ಎಂದು ಬಜಾಜ್ ಆಟೋ ಹೇಳಿಕೊಂಡಿದೆ.
ಇನ್ನು ಬಜಾಜ್ ಫ್ರೀಡಂ 125 ಬೈಕ್ ಬ್ಲೂಟೂತ್ ಕನೆಕ್ಟಿವಿಟಿ, ಮೊನೊ ಶಾಕ್ ಸಸ್ಪೆನ್ಷನ್ ಮತ್ತು ಎತ್ತರದ ಸೀಟ್ ನೊಂದಿಗೆ ಬರುತ್ತದೆ.. ಎಲ್ಇಡಿ ರೌಂಡ್ ಹೆಡ್ಲೈಟ್ ಅಳವಡಿಸಲಾಗಿದೆ. ಈಗಾಗಲೇ ಕಂಪನಿ ವೆಬ್ ಸೈಟ್ ನಲ್ಲಿ ಬೈಕ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಖರೀದಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ.