EV ಕಾರಗಳ ಮಾರಟದಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ!

EV ಕಾರಗಳ ಮಾರಟದಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ!

ಸಿಲಿಕಾನ್‌ ಸಿಟಿ ಬೆಂಗಳೂರು ಎಲೆಕ್ಟ್ರಿಕ್‌ ವಾಹನಗಳ ಮಾರಾಟದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಹಿಂದೆಯೇ ಬ್ಯಾಟರಿ ಚಾಲಿತ ವಾಹನಗಳ ಮಾರಾಟದಲ್ಲಿ ದೇಶದಲ್ಲಿ ದೋಡ್ಡ ನಗರಗಳಾದ ದಿಲ್ಲಿ, ಮುಂಬೈ, ಹೈದರಾಬಾದ್‌, ಪುಣೆ, ಚೆನ್ನೈ ಅನ್ನು ಹಿಂದಿಕ್ಕಿದ್ದ ಐಟಿ ಸಿಟಿ ಇದೀಗ 2024ರಲ್ಲೂ ಇವಿ ನೋಂದಣಿಯಲ್ಲಿ ತನ್ನ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡಿದೆ. ಇನ್ನು ಕಾರುಗಳ ಮಾರಾಟದಲ್ಲಿ ಟಾಟ ಗ್ರೊಪ್‌ನ ಸಂಸ್ಥೆಯ ಅಟೊಮೋಬೈಲ್ಸ ಕಂಪಿನಿ ಟಾಟಾ ಟಿಯಾಗೋ ಇವಿ ಮುಂಚೂಣಿಯಲ್ಲಿದೆ.

ಇತ್ತಿಚೆಗೆ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚು ಸದ್ದು ಮಾಡುತ್ತಿದು ಆನೇಕ ಕಂಪನಿಗಳು ಇವಿ ಇಡಸ್ಟ್ರಿಯಲ್ಲಿ ಹಲವು ಕಂಪನಿಗಳು ಹಣ ಹೂಡಿಕೆ ಮಾಡಿ ಹೋಸ ಹೋಸ ತಂತ್ರಜ್ಞಾನವನ್ನು ಪರಿಚಯಿಸಿ ಹೋಸ ಮಾಡಲ್‌ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಎಲೆಕ್ಟ್ರಿಕ್‌ ವಾಹನಗಳ ಮಾರಾಟದಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಮತ್ತೆ ದೇಶದ ಎಲ್ಲಾ ನಗರಗಳನ್ನೂ ದಾಟಿ ಮುಂದೆ ಸಾಗಿಸಿದೆ. ಬ್ಯಾಟರಿ ಚಾಲಿತ ವಾಹನಗಳ ಮಾರಾಟದಲ್ಲಿ ಈ ಹಿಂದೆಯೇ ದೇಶದ ದೊಡ್ಡ ನಗರಗಳಾದ ದಿಲ್ಲಿ, ಮುಂಬೈ, ಹೈದರಾಬಾದ್‌, ಪುಣೆ, ಚೆನ್ನೈ ಅನ್ನು ಹಿಂದಿಕ್ಕಿದ್ದ ಐಟಿ ಸಿಟಿ ಇದೀಗ 2024ರಲ್ಲೂ ಇವಿ ನೋಂದಣಿಯಲ್ಲಿ ತನ್ನ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡಿದೆ.

ಜನೆವರಿ-ಮೇ ಅವಧಿಯಲ್ಲಿ 4283 ನೋಂದಣಿಯಾಗಿದ್ದು, ಹಿಂದಿನ ವರ್ಷ 8690 ಮಾರಟವಾದವು ಎಂದು ಅಟೋ ಡೇಟಾ ಇಂಟಲಿಜೆನ್ಸ ಸಂಸ್ಥೆ ಜಾಟಾ ಡೈನಾಮಿಕ್ಸ ತಿಳಿಸಿದೆ.

ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡಿರುವ ಉದ್ಯೋಗಿಗಳು, ಹಸಿರು ಇಂಧನದ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಒಲವು, 25 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವಾಹನಗಳ ಮೇಲೆ ಇರುವ ಶೂನ್ಯ ತೆರಿಗೆ ನೀತಿ, ಇವಿ ಚಾರ್ಜಿಂಗ್‌ಗೆ ರಿಯಾಯಿತಿ ದರದ ವಿದ್ಯುತ್‌, ವಿಶಾಲ ಚಾರ್ಜಿಂಗ್‌ ಸ್ಟೇಷನ್‌ಗಳ ಜಾಲ ಸೇರಿದಂತೆ ಹಲವು ಕಾರಣಗಳಿಂದ ನಗರದಲ್ಲಿ ಇವಿಗಳ ಮಾರಾಟ ಹೆಚ್ಚಾಗಿದೆ ಎಂದು ಜಾಟೋ ಡೈನಾಮಿಕ್ಸ್‌ನ ಎಂಡಿ ರವಿ ಭಾಟಿಯಾ ಹೇಳಿದ್ದಾರೆ.

ದಿಲ್ಲಿ ಇವಿ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದ್ದು ನಗರದಲ್ಲಿ 4,016 ವಾಹನಗಳು ಮಾರಾಟವಾಗಿವೆ. ಹೈದಾರಾಬದ್‌ 2,114 ವಾಹನಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ 2,065 ಹಾಗೂ ಪುಣೆ 1,620 ವಾಹನಗಳ ನೋಂದಣಿಯೊಂದಿಗೆ ನಂತರದ ಸ್ಥಾನದಲ್ಲಿವೆ. ಇದೇ ವೇಳೆ ಚೆನ್ನೈನಲ್ಲಿ 1,454, ಅಹಮದಾಬಾದ್‌ನಲ್ಲಿ 1,093, ಜೈಪುರದಲ್ಲಿ 1,354 ವಾಹನಗಳು ಜನವರಿ-ಮೇ ಅವಧಿಯಲ್ಲಿ ಮಾರಾಟವಾಗಿವೆ.

ಕಾರುಗಳಲ್ಲಿ ಟಾಟಾ ಟಿಯಾಗೋ ಇವಿಗೆ ಅಗ್ರಸ್ಥಾನ
ಇನ್ನು ಟಾಪ್‌ 10 ನಗರಗಳಲ್ಲಿ ಮಾರಾಟವಾಗಿರುವ ಎಲೆಕ್ಟ್ರಿಕ್‌ ಕಾರುಗಳಲ್ಲಿ ಟಾಟಾದ ಟಿಯಾಗೋ.ಇವಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷ 13,176 ಕಾರುಗಳು ಮಾರಾಟವಾಗಿದ್ದರೆ, ಈ ವರ್ಷ ಜನವರಿಯಿಂದ ಮೇವರೆಗೆ 4,114 ಕಾರುಗಳು ಬಿಕರಿಯಾಗಿವೆ.

2,698 ಕಾರುಗಳ ಮಾರಾಟದೊಂದಿಗೆ ಟಾಟಾ ಪಂಚ್‌ ಎರಡನೇ ಸ್ಥಾನದಲ್ಲಿದ್ದರೆ, ಟಾಟಾ ನೆಕ್ಸಾನ್‌ 2,382 ಕಾರುಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ 2,322 ಟಾಟಾ ಟಿಗೋರ್‌ ಎಕ್ಸ್‌ಪ್ರೆಸ್‌ ಟಿ 2 ಕಾರುಗಳು ಮಾರಾಟವಾಗಿದ್ದು ನಾಲ್ಕನೇ ಸ್ಥಾನದಲ್ಲಿವೆ. ಐದನೇ ಸ್ಥಾನದಲ್ಲಿ ಎಂಜಿ ಕಾಮೆಟ್‌ ಇದ್ದು 2,082 ಕಾರುಗಳು ಮಾರಾಟವಾಗಿವೆ.

Share this post

Post Comment